ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀಶಂಕರ ಮಠದಲ್ಲಿ ಶ್ರೀ ಶಾರದಾ ಶಂಕರ ಭಕ್ತ ಮಂಡಳಿಯಿಂದ ಸೋಮವಾರ ಶ್ರೀ ಶಂಕರ ಜಯಂತಿ ಮಹೋತ್ಸವ ಆಚರಿಸಲಾಯಿತು.
ಶ್ರೀ ಶಾರದಾ ಶಂಕರ ಭಕ್ತ ಮಂಡಳಿ, ಸತ್ಯದೇವೇಶ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ, ವಿಜಯ ಧ್ವಜ ಭಜನಾ ಮಂಡಳಿ, ಲಲಿತಾ ಸಹಸ್ರನಾಮ ಪಾರಾಯಣ ಭಗಿನಿಯರ ಬಳಗ, ಗಾಯತ್ರಿ ವಿಶ್ವಕರ್ಮ ಮಹಿಳಾ ಭಜನಾ ಮಂಡಳಿ ಮತ್ತು ಶ್ರೀ ಗಂಗಾಧರೇಶ್ವರ ಮಹಿಳಾ ಭಜನಾ ಮಂಡಳಿ ಸಹಯೋಗದಲ್ಲಿ ಮೇ2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಪ್ರತಿ ನಿತ್ಯ ಬೆಳಗ್ಗೆ ಅಷ್ಟೋತ್ತರ, ಅಭಿಷೇಕ, ಭಜನೆ ಸೇವೆ ಜರುಗಲಿದ್ದು, ಮೇ 2ರಂದು ಗ್ರಾಮ ಪ್ರದಕ್ಷಿಣೆ, ಶ್ರೀ ಶಂಕರಾಚಾರ್ಯರಿಗೆ ಪಾದಪೂಜೆ, ಅಷ್ಟಾವಧಾನ, ಭಜನೆ ಸೇವೆ ಹಮ್ಮಿಕೊಳ್ಳಲಾಗಿದೆ.
ಚಿಕ್ಕಮಕ್ಕಳಿಗಾಗಿ ಧಾರ್ಮಿಕ ವೇಷ ಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಭಜನಾ ಸೇವೆ, ನೈವೇದ್ಯ, ಮಹಾ ಮಂಗಳಾರತಿ ಮತ್ತು ತೀಥ ಪ್ರಸಾದ ವಿತರಣೆ ಜರುಗಲಿದೆ ಎಂದು ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಸಂಚಾಲಕ ನಾರಾಯಣರಾವ್ ವೈದ್ಯ ತಿಳಿಸಿದ್ದಾರೆ.