ಶ್ರೀ ವೃಷಭ ದೇಗುಲದಲ್ಲಿ ಹಾವು ಪ್ರತ್ಯಕ್ಷ

mng may 28 Saaribala snake 1
Published on

ಮೈಸೂರು: ರಾಮಕೃಷ್ಣನಗರದ ಜಿ ಮತ್ತು ಎಚ್ ಬ್ಲಾಕ್‌ನಲ್ಲಿರುವ ಶ್ರೀ ವೃಷಭ ದೇವಾಲಯದಲ್ಲಿ ಗುರುವಾರ ಹಾವು ಪ್ರತ್ಯಕ್ಷವಾಗಿದೆ.

ಅರ್ಚಕರು ಎಂದಿನಂತೆ ದೇಗುಲದ ಬಾಗಿಲು ತೆರೆಯಲು ಆಗಮಿಸಿದ ವೇಳೆ ಕಾಣಿಸಿಕೊಂಡಿದೆ. ಬಾಗಿಲಿನ ಮೇಲ್ಭಾಗದಲ್ಲಿದ್ದ ಇದನ್ನು ಕಂಡು ಗಾಬರಿಗೊಂಡಿದ್ದಾರೆ. ಜತೆಗೆ, ಭಕ್ತರೂ ಆತಂಕಗೊಂಡಿದ್ದಾರೆ.


ಕೂಡಲೇ ಉರಗ ಸಂರಕ್ಷಣೆ ಮಾಡುವ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಬಂದ ಅವರು, ಅದನ್ನು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ. ನಂತರ ಭಕ್ತರು ನಿರಾಳರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net