ಶ್ರೀ ವೀರಭದ್ರೇಶ್ವರ ಮಹಿಮೆ ಅಪಾರ

14 HBD 2
ಚಾಂಗಲೇರಾ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ರಥೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಗುರುಲಿಂಗ ಶಿವಾಚಾರ್ಯರು, ಶ್ರೀ ಹವಾ ಮಲ್ಲಿನಥ ಮಹಾರಾಜ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಇತರರಿದ್ದರು.
Published on

ಚಿಟಗುಪ್ಪ: ಚಾಂಗಲೇರಾ ಶ್ರೀ ವೀರಭದ್ರೇಶ್ವರ ಮಹಿಮೆ ಅಪಾರವಾಗಿದ್ದು, ಇಂತಹ ಜಾತ್ರಾ ಉತ್ಸವಗಳು ಹಿಂದು ಧರ್ಮದ ಸಂಸ್ಕೃತಿ, ಪರಂಪರೆ ಬಿಂಬಿಸುವ ಜತಗೆ ಭಾವೈಕ್ಯತೆಯ ಮೂಡಿಸುತ್ತ ಬರುತ್ತಿವೆ ಎಂದು ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ರಥೋತ್ಸವ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹೈದರಾಬಾದ್-ಕರ್ನಾಟಕದಲ್ಲಿ ವಿಶೇಷವಾಗಿದೆ. ಈ ದೇವರಲ್ಲಿ ಭಕ್ತಿ, ಶ್ರದ್ಧೆಯಿಂದ ನೆನೆದಲ್ಲಿ ಇಷ್ಟಾರ್ಥ ಸಿದ್ದಿಸಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಶ್ರೀ ವೀರಭದ್ರೇಶ್ವರ ದೇವರ ಮಹಿಮೆಗೆ ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡ ಲಕ್ಷಾಂತರ ಭಕ್ತರೇ ಸಾಕ್ಷಿಯಾಗಿದ್ದಾರೆ. ದೇವರ ಹಾಗೂ ಕ್ಷೇತ್ರದ ಜನರ ಆಶೀರ್ವಾದ ನನಗೂ ಲಭಿಸಿದ್ದು, ದೇವಸ್ಥಾನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಮಾದರಿ ಸುಕ್ಷೇತ್ರವಾಗಿ ಮಾಡಲು ಪ್ರಯತ್ನಿಸುವೆ ಎಂದರು.

ಮಾಜಿ ಸಚಿವ ರಾಜಶೇಖರ ಪಾಟೀಲï ಮಾತನಾಡಿ, ಶ್ರೀ ವೀರಭದ್ರೇಶ್ವರ ಶಕ್ತಿ ಅಘಾದವಾಗಿದೆ. ನನ್ನ ರಾಜಕೀಯ ಇದೇ ಕ್ಷೇತ್ರದಿಂದ ಆರಂಭಗೊಂಡಿದ್ದು, ಈಗ ಕ್ಷೇತ್ರದ ಬೇರೆಯಾದರು ಸಹ ದೇವಸ್ಥಾನಕ್ಕೂ ಹಾಗೂ ಕ್ಷೇತ್ರದ ಜನರಿಗೂ ಅವಿನಾಭಾವ ಸಂಬಂಧವಿದೆ. ದೇವಸ್ಥಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಸದಾ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸ್ಥಳೀಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಬರ್ದಿಪುರದ ಶ್ರೀ ಅವಧೂತ ಗಿರಿ ಮಹಾರಾಜ, ಹುಮನಾಬಾದ್ ಹಿರೇಮಠದ ಶ್ರೀ ರೇಣುಕಾಗಂಗಾಧರ ಶಿವಾಚಾರ್ಯರು, ನರನಾಳದ ಶ್ರೀ ಶಿವಕುಮಾರ ಶಿವಾಚಾರ್ಯರು ಸೇರಿ ಇತರ ಶ್ರೀಗಳು, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ತಹಸೀಲ್ದಾರ್ ಮಂಜುನಾಥ ಪಾಂಚಳ, ಪ್ರಮುಖರಾದ ಅರುಣ ಪಾಟೀಲ್, ಅನಂತರಾವ ಕುಲಕರ್ಣಿ, ವಿಜಯಕುಮಾರ ವಾಲಿ, ನರೇಶ ತೊಂಟಿ, ಶಿವಕುಮಾರ ಸ್ವಾಮಿ, ನೂರೋದ್ದಿನ್, ಪ್ರಭು ಸಾವಳಗೆ, ಭೀಮರೆಡ್ಡಿ ವರವಟ್ಟಿ, ಸುಭಾಷ ಆರಡಿ, ಶಿವವಕುಮಾರ ಜುನ್ನಾ, ಶ್ರೀಮಂತ ಪಾಟೀಲ್, ಬಾಬುರಾವ ಪಾಟೀಲ್, ಉಮೇಶ ಕುಲಕರ್ಣಿ, ನಾಗಭೂಷಣ ಕಮಠಾಣ, ಮಂಜುನಾಥ ಸುಣಗಾರ, ರಾಜಶೇಖರ ಮಳ್ಳಿ, ರವಿ ಘಾರೇಲ್, ಸಂತೋಷ ಕಮಲಾಪುರ, ಸಕಲ ಭಕ್ತಾದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net