ಶ್ರೀ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ

22222222
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಮೃತ್ಯುಂಜಯನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಸಾನ್ನಿಧ್ಯ ವಹಿಸಿದ್ದ ಶಿರಕೋಳದ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮೀಜಿ ಚಾಲನೆ ನೀಡಿದರು.
ದೇವಸ್ಥಾನದಿಂದ ಹೊರಟ ಗುಗ್ಗಳ ಸವದತ್ತಿ ರಸ್ತೆ, ತೋಟಿಗೇರ ಓಣಿ, ಮೂರುಸಾವಿರ ಮಠ ರಸ್ತೆ, ಡಿಪೋ ವೃತ್ತದ ಮುಖಾಂತರ ಆರಿಗೇರಿ, ಬಣಗಾರ ಓಣಿ ಹಾಗೂ ಶ್ರೀ ಮುರುಘಾಮಠಕ್ಕೆ ತೆರಳಿ ದೇವಸ್ಥಾನಕ್ಕೆ ವಾಪಸ್ಸಾಗಿ ಕೆಂಡ ಹಾಯುವ ಮೂಲಕ ಸಂಪನ್ನಗೊಂಡಿತು.
ದೇವಸ್ಥಾನದ ಅಧ್ಯಕ್ಷ ಅರವಿಂದ ಏಗನಗೌಡರ, ಮೃತ್ಯುಂಜಯ ಶಿದ್ನಾಳ, ಈಶ್ವರ ಮಾಲಗಾರ, ಮಹಾಂತೇಶ ಗೊರವನಕೊಳ್ಳ, ಸಿದ್ದಪ್ಪ ಕರಡಿಗುಡ್ಡ, ಸೋಮಣ್ಣ ಅರಳಿ, ಈರಣ್ಣ ಗೋಡಿಕಟ್ಟಿ ಹಾಗೂ ಹಿರಿಯರು ಪಾಲ್ಗೊಂಡಿದ್ದರು. ನೂರಾರು ಮಹಿಳೆಯರು ಆರತಿಯೊಂದಿಗೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net