ಶ್ರೀ ವೀರಭದ್ರನ ಅದ್ದೂರಿ ರಥೋತ್ಸವ

2604 CHN 01a
ಚಿಂಚೋಳಿ ತಾಲೂಕಿನ ಸುಲೇಪೇಟದಲ್ಲಿ ಸಂಭ್ರಮದಿAದ ಶ್ರೀ ವೀರಭದ್ರೇಶ್ವರ ದೇವರ ಪ್ರಭಾವಳಿ ಉತ್ಸವ ನಡೆಯಿತು.
Published on

ಚಿಂಚೋಳಿ: ಸುಲೇಪೇಟದಲ್ಲಿ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಶ್ರೀ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯನ್ನು ಪ್ರಭಾವಳಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ರೌದ್ರಾವತಾರದಿಂದ ಮೆರವಣಿಗೆ ಮಾಡಲಾಯಿತು. ಪ್ರಭಾವಳಿಯ ವೈಭವ ಕಣ್ತುಂಬಿಕೊಳ್ಳಲು ರಸ್ತೆ ಎರಡು ಬದಿಯಲ್ಲಿ ಅಸಂಖ್ಯಾತ ಜನರು ಜಮಾಯಿಸಿದ್ದರು. ನಂತರ ಅಗ್ಗಿ ತುಳಿದು ಹರಕೆ ತೀರಿಸಿದರು.

ಸಂಜೆ ಮಹಾರಥೋತ್ಸವ ವಿವಿಧ ಮಠಾಧೀಶರು, ಗಣ್ಯರು ಚಾಲನೆ ನೀಡಿದರು. ಶ್ರೀ ವೀರಭದ್ರೇಶ್ವರ ಮಹಾರಾಜ್‌ಕಿ ಜೈ.. ಜೈ ವೀರಭದ್ರ.. ಹರಹರ ಮಹಾದೇವ ಸೇರಿ ವಿವಿಧ ಜೈಘೋಷ ಮೊಳಗಿದವು. ಭಕ್ತರು ಹಣ್ಣು, ಉತ್ತತ್ತಿ ಹಾಗೂ ನಾಣ್ಯವನ್ನು ರಥಕ್ಕೆ ಎಸೆದು ಕೃತಾರ್ಥರಾದರು. ರಾತ್ರಿಯಿಡೀ ಪ್ರಮುಖ ಬೀದಿಗಳಲ್ಲಿ ಭಜನೆ ಕೋಲಾಟದೊಂದಿಗೆ ಉಚ್ಛಾಯಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಮುಖರಾದ ಮಹಾರುದ್ರಪ್ಪ ದೇಸಾಯಿ, ಮುರಗೆಪ್ಪ ಕುಕ್ಕಡಿ, ಸಿದ್ದಯ್ಯ ಸ್ವಾಮಿ, ಗುಲಾಬ ಹರದೂರ, ಬಸವರಾಜ ದೇಸಾಯಿ, ಮಲ್ಲಪ್ಪ ಪಡಶೆಟ್ಟಿ, ಸಿದ್ದಯ್ಯ ಸ್ವಾಮಿ ಖಜ್ಜಿ, ಮಲ್ಲಿಕಾರ್ಜುನ ದೇಸಾಯಿ, ರವೀಂದ್ರ ಪಾಟೀಲ್ ರಾಮತಿರ್ಥ, ಮಹೇಶ ಹಿರೇನ, ಶಿವಕುಮಾರ ರೇಮಣಿ, ನಾಗೇಶ ಚಾಂಗಲೇರಿ, ರಮೇಶ ದೇಸಾಯಿ, ಶಿವಕುಮಾರ ಮನ್ನಳ್ಳಿ, ರವಿಕುಮಾರ ಮಿಠಾಯಿಗರ, ವಿಶ್ವನ್ನಾಥ ಅವರಾದಿ, ಮಹೇಶ ಬೆಮಳಗಿ, ಶರಣಪ್ಪ ಸುಲೇಪೇಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net