

ಕೊಳ್ಳೇಗಾಲ: 2024-25ನೇ ಶೈಕ್ಷಣಿಕ ಸಾಲಿನ 5ನೇ ಸೆಮಿಸ್ಟರ್‌ನ ಪದವಿ ಫಲಿತಾಂಶದಲ್ಲಿ ಪಟ್ಟಣದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜು ಶೇಕಡಾ ಶೇ.99 ರಷ್ಟು ಫಲಿತಾಂಶ ಪಡೆದಿದೆ.
ಪರೀಕ್ಷೆಗೆ ಹಾಜರಾಗಿದ್ದ 79 ಬಿ.ಕಾಂ ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 64 ವಿದ್ಯಾರ್ಥಿ ಗಳು ಅತ್ಯುನ್ನತ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 1 ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಿಎಸ್‌ಟಿ ಲಾ ಮತ್ತು ಪ್ರಾಕ್ಟೀಸ್ ವಿಷಯದಲ್ಲಿ 12, ಫೈನಾನ್ಷಿಯಲ್ ವಿಷಯದಲ್ಲಿ 11, ಪ್ರಿನ್ಸಿಪಾಲ್ಸ್ ಮತ್ತು ಪ್ರಾಕ್ಟೀಸ್ ಆಫ್ ಆಡಿಟಿಂಗ್ ವಿಷಯದಲ್ಲಿ 7, ಇನ್ಕಮ್ ಟಾಕ್ಸ್ ಮತ್ತು ಪ್ರಾಕ್ಟೀಸ್ ವಿಷಯದಲ್ಲಿ 4, ಇಂಡಿಯನ್ ಅಕೌಟಿಂಗ್ ಸ್ಟಾೃಂಡರ್ಡ್ ವಿಷಯದಲ್ಲಿ 3 ವಿದ್ಯಾರ್ಥಿಗಳು 100 ಕ್ಕೆ 100 ಅಂಕವನ್ನು ಗಳಿಸಿದ್ದಾರೆ.
ವಿ. ಹೇಮಶ್ರೀ 700 ಕ್ಕೆ 692, ಎಂ.ಮಧುರಸೋನಾ 682, ಅಫಿರಾಬಾನು 681, ಎನ್.ರಕ್ಷಿತಾ ಮತ್ತು ಬಿ.ಎನ್. ಚಂದನಾ 678 ಹಾಗೂ ಎನ್ .ರಾಜೇಶ ಮತ್ತು ಎನ್.ಎಸ್. ಪ್ರಗತಿ 677 ಅಂಕಗಳನ್ನು ಪಡೆದುಕೊಂಡು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದಾರೆ. ಅಲ್ಲದೇ ಬಿ.ಬಿ.ಎ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 9 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಕೂಡ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶೇ.100 ರಷ್ಟು ಫಲಿತಾಂಶವನ್ನು ನೀಡಿರುತ್ತಾರೆ.
ಡಿಜಿಟಲ್ ಮಾರ್ಕೇಟಿಂಗ್ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಎಸ್.ಅನುಷಾ. 638, ಎಮ್.ಉಮೇಶ್ 627 ಹಾಗೂ ಅಲ್ವಿರ ಖಾನ್ 624 ಅಂಕಗಳನ್ನು ಪಡೆದುಕೊಂಡು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದಾರೆ.
ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶ್ರೀ ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಡಿ.ಕುಮಾರ ಕೃಷ, ಕಾರ್ಯದರ್ಶಿ ಪಿ.ಜಿ. ಶ್ರೀಧರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಪ್ರಾಂಶುಪಾಲ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.