ಕೊಳ್ಳೇಗಾಲ: 2025-26ನೇ ಸಾಲಿನ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದ ಪೂರ್ವಭಾವಿ ಆಯ್ಕೆ ಶಿಬಿರಕ್ಕೆ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಯೋಜನೆ (ಎನ್‌ಎಸ್‌ಎಸ್) ಘಟಕವು ಹೆಚ್ಚು ಕ್ರಿಯಾಶೀಲ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು. 100 ವಿದ್ಯಾರ್ಥಿಗಳ ಒಳಗೊಂಡ ಒಂದು ಘಟಕವು ಎನ್‌ಎಸ್‌ಎಸ್ ಮುಖೇನವಾಗಿ ಹಲವು ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಚಾಮರಾಜನಗರ ವಿ.ವಿ.ಯಿಂದ ಗಣರಾಜ್ಯೋತ್ಸವ ಪಥ ಸಂಚಲನದ ಪೂರ್ವಭಾವಿ ಶಿಬಿರಕ್ಕೆ ಆಯ್ಕೆಯಾದ 6 ವಿದ್ಯಾರ್ಥಿಗಳ ಪೈಕಿ ವಾಸವಿ ಪ್ರಥ ಮ ದರ್ಜೆ ಕಾಲೀಜಿನ ದ್ವಿತೀಯ ವರ್ಷದ ಬಿಸಿಎ ವಿದ್ಯಾರ್ಥಿಗಳಾದ ಎಸ್. ಶರಣಗೌಡ, ಜಿ.ಆರ್.ಕೃಷ್ಣ, ಆರ್.ಸ್ವಾತಿ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಎಂ.ಪಿ. ತ್ರಿಷಾ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಶ್ರೀ ವಾಸವಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಅವರು ವಿಶೇಷ ಸಮವಸ್ತ್ರ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲ, ಬೋಧಕರು ಅಭಿನಂದಿಸಿದ್ದಾರೆ.