ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ

6hgr1
ಹಲಗೂರಿನ ಬೃಹನ್ಮಠದಲ್ಲಿ ಶ್ರೀ ರೇಣುಕಾಚಾರ್ಯರ ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಆಯೋಜಿಸಲಾಗಿತ್ತು. ಗುರುವಿನಪುರದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.
Published on

ಹಲಗೂರು: ಹಲಗೂರಿನ ಬೃಹನ್ಮಠದಲ್ಲಿ ಸೋಮವಾರ ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮವನ್ನು ಗುರುವಿನಪುರದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.


ಶ್ರೀ ರೇಣುಕಾಚಾರ್ಯರ ವಿಗ್ರಹಕ್ಕೆ ಜಗದೀಶ ಶಿವಾಚಾರ್ಯ ಸ್ವಾಮೀಜಿ ಅವರು ರುದ್ರಾಭಿಷೇಕ ಮಾಡಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಂತ್ರ ಪಠಣದೊಂದಿಗೆ ಪೂಜೆ ನೆರವೇರಿಸಿದರು.


ಶತ ಶತಮಾನಗಳ ಹಿಂದೆ ವೀರಶೈವ ಧರ್ಮವನ್ನು ಸ್ಥಾಪಿಸಿ ವಿಶ್ವಾದ್ಯಂತ ಈ ಧರ್ಮವನ್ನು ಪಸರಿಸಿದ ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವವನ್ನು ಈ ದಿನ ಆಚರಿಸುತ್ತಿದ್ದೇವೆ. 1400 ವರ್ಷಗಳ ಕಾಲ ಈ ಲೋಕದಲ್ಲಿ ಸಂಚಾರ ಮಾಡಿ ಧರ್ಮವನ್ನು ಪ್ರಚಾರ ಮಾಡಿದ್ದಾರೆ. ಈ ದಿನ ಹಲಗೂರಿನ ಬೃಹನ್ಮಠದಲ್ಲಿ ಗ್ರಾಮದ ಪ್ರಮುಖರೆಲ್ಲ ಸೇರಿ ಶ್ರೀ ರೇಣುಕಾಚಾರ್ಯರ ಜನ್ಮದಿನವನ್ನು ಆಚರಿಸುವ ಪುಣ್ಯದ ಕೆಲಸ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಹಲಗೂರಿನ ವೀರಶೈವ ಮುಖಂಡರು ಹಾಗೂ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net