ಶ್ರೀ ರುದ್ರೇಶ್ವರ ಸ್ವಾಮಿ ಬ್ರಹ್ಮರಥೋತ್ಸವದ ವೈಭವ

nelmangal
Published on

ನೆಲಮಂಗಲ ಪೇಟೆಬೀದಿಯಲ್ಲಿ ಮನೆ ಮಾಡಿದ ಹಬ್ಬದ ವಾತಾವರಣ | ಜಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ

ನೆಲಮಂಗಲ: ನಗರದ ಜನತೆಯಲ್ಲಿ ಹಬ್ಬದ ವಾತಾವರಣವನ್ನೇ ನಿರ್ಮಿಸುವ ಪೇಟೆಬೀದಿಯಲ್ಲಿನ ಶ್ರೀ ರುದ್ರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಪ್ರತಿವರ್ಷದಂತೆ ಶಿವರಾತ್ರಿ ಬಳಿಕ ನಡೆಯುವ ರಥೋತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

ರಥೋತ್ಸವದ ಪ್ರಯುಕ್ತ ಬೆಳಗ್ಗೆಯಿಂದಲೂ ಶ್ರೀ ರುದ್ರೇಶ್ವರಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹೋಮ&ಹವನ ನಡೆಸಲಾಯಿತು.

ರಥೋತ್ಸವದ ವೇಳೆ ವೀರಗಾಸೆ, ನಂದಿಧ್ವಜ ಕುಣಿತ, ಜಾನಪದ ಕಲಾ ತಂಡಗಳ ಕಲಾವಿದರ ನೃತ್ಯಗಳು ಜನ ಸಮೂ ಹದ ನಡುವೆ ಮೇಳೈ ಸಿದವು. ಸ್ಥಳಿಯರು ರಥೋ ತ್ಸವದ ಬೀದಿ ಯಲ್ಲಿ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಿ ಆಗಮಿಸಿದ ಭಕ್ತ ಜನರ ದಣಿವಾರಿಸಿದರು.

ನಗರಸಭೆ ಉಪಾಧ್ಯಕ್ಷ ಆನಂದ್​, ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದಿಪ್​, ಪುರುಷೋತ್ತಮ್​, ಟೌನ್​ ಕೋ ಅಪರೇಟಿವ್​ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು, ನಿರ್ದೇಶಕ ಕಾರ್ತಿಕ್​, ನಾಗರಾಜು, ಶ್ರೀರುದ್ರೇಶ್ವರ ಸ್ವಾಮಿ ದೇವಾಲಯ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಎನ್​.ಜಿ.ರುದ್ರಮೂರ್ತಿ, ವೀರಶೈವ ಸಮಾಜ ಅಧ್ಯಕ್ಷ ಎನ್​.ಆರ್​.ಜಗದೀಶ್​, ಬಸವೇಶ್ವರ ಯುವಕ ಸಂದ ಅಧ್ಯಕ್ಷ ಎನ್​.ಎಸ್​.ಶ್ರೀಗಣೇಶ್​, ವಕೀಲ ರುನಾಥ್​, ಮುಖಂಡ ಬಾವಿಕೆರೆ ಗಂಗರಾಜು, ಪುಟ್ಟಣ್ಣ, ಮಹೇಶ್​, ಚಂದು, ಪುನೀತ್​ರಾಜ್​, ಶಿವಶಂಕರ್​, ಮಹದೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net