

ಹಾಸನ: ಶ್ರೀ ರಾಮಸೇನೆ ಸಂಘಟನೆಯಿಂದ ಅ.30ರಿಂದ ನ.5 ರವರೆಗೆ ದತ್ತಮಾಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.
ಕಳೆದ 19 ವರ್ಷಗಳಿಂದ ಚಿಕ್ಕಮಗಳೂರು ಗುರು ದತ್ತಾತ್ರೇಯ ದತ್ತ ಪೀಠಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ರಾಜ್ಯಾದ್ಯಂತ ದತ್ತಮಾಲೆ ಅಭಿಯಾನವನ್ನು ಶ್ರೀ ರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅ.30ರಂದು ದತ್ತ ಮಾಲೆ ಧಾರಣೆ, ನ.2ರಂದು ದತ್ತ ದೀಪೋತ್ಸವ, ನ.4ರಂದು ಪಡಿ ಸಂಗ್ರಹ, ನ.5ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ಧರ್ಮಸಭೆ, ನಂತರ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ, ಹೋಮ, ಪೂಜೆ, ಹಾಗೂ ಸಾಧು ಸಂತರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹುತಿ ನೀಡಿದರು.
ಶ್ರೀ ರಾಮಸೇನೆಯ ಈ ದತ್ತ ಮಾಲೆ ಅಭಿಯಾನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಸೇನೆಯ ತಾಲೂಕು ಅಧ್ಯಕ್ಷರಾದ ಮಹೇಶ್ ಕುಮಾರ್, ಲೋಕೇಶ್ ಮಂಜು, ಭರತ್ ದೇಕಲ, ನಾಗೇಶ್, ಸುರೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.