

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಭಗತ್ ಸಿಂಗ್ ವೇದಿಕೆಯ ಸದಸ್ಯರು ಗ್ರಾಮದಲ್ಲಿ ನೂರಾರು ವರ್ಷಗಳಿಂದಲೂ ಅತಿಕ್ರಮಣಕ್ಕೊಳಗಾಗಿರುವ ಶ್ರೀ ರಾಮಮಂದಿರದ ಸ್ವಚ್ಛತಾ ಕಾರ್ಯ ಕೈಗೊಂಡರು.
ಪುರಾತನ ಐತಿಹಾಸಿಕ ದೇವಾಲಯವು ಹೋಟೆಲ್ ಮತ್ತು ಸೊಸೈಟಿ ಕಟ್ಟಡಗಳಿಂದ ಅತಿಕ್ರಮಣವಾಗಿದ್ದ ಹಿನ್ನೆಲೆಯಲ್ಲಿ ವೇದಿಕೆಯ ಸದಸ್ಯರು ಹಾಗೂ ಗ್ರಾಮಸ್ಥರು ಭಾನುವಾರ ಜೆಸಿಬಿ ನೆರವಿನಿಂದ ಗಿಡಗಂಟಿಗಳು ಹಾಗೂ ಸುತ್ತಲೂ ಆವರಿಸಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಿದರು. ವೇದಿಕೆಯ ಅಧ್ಯಕ್ಷ ಕೆ.ವೆಂಕಟೇಶ್, ಕಾಂತರಾಜು, ಗ್ರಾಮಪಂಚಾಯಿತಿ ಸದಸ್ಯ ಗೋವಿಂದ, ರೈತ ಮುಖಂಡ ಮಹೇಶ್ ನಾಯ್ಕ, ನಾಗರಾಜು, ರಾಮಕೃಷ್ಣ, ಗೋಪಾಲನಾಯ್ಕ ಸೇರಿದಂತೆ ಹಲವರು ಇದ್ದರು.