ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿಗೆ ಆರು ರ‌್ಯಾಂಕ್

CTD BMS.....RANK..
Published on

ಚಿತ್ರದುರ್ಗ: ಬೆಂಗಳೂರು ರಾಜೀವ್‌ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಕಳೆದ ಸಾಲಿನ ಬಿಎಎಂಎಸ್ ಆಯುರ್ವೇದ ಪರೀಕ್ಷೆಯಲ್ಲಿ ಹೊಳಲ್ಕೆರೆ ತಾಲೂಕು ಮಲ್ಲಾಡಳಿಹಳ್ಳಿ ಅನಾಥಸೇವಾಶ್ರಮ ವಿಶ್ವಸ್ತ ಸಮಿತಿಯ ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆರು ವಿದ್ಯಾರ್ಥಿಗಳು ವಿವಿಧ ರ‌್ಯಾಂಕ್‌ಗಳನ್ನು ಪಡೆದಿದ್ದಾರೆ.

ರಿಸರ್ಚ್ ಮೆಥಡಾಲಜಿ ವಿಭಾಗದಲ್ಲಿ ವಿ.ಎಲ್. ಭರತ್ 8ನೇ, ಸುಮಾಮಣಿ ಬಾಬು 10ನೇ ರ‌್ಯಾಂಕ್, ಟಿ. ಮೇಘನಾ 10ನೇ(ಬಾಲರೋಗ), ಕೆ.ಎಂ. ಜಾಹ್ನವಿ 8ನೇ, ಜೋಶಿ ಮೋನಿಕಾ ಸಂಜಯ್ 10ನೇ (ಆಗದ ತಂತ್ರ), ಸ್ನೇಹಲ್ ಪಾಟೀಲ್ ಶಾಲಾಕ್ಯತಂತ್ರ, ಸಂಸ್ಕೃತ ವಿಭಾಗಗಳಲ್ಲಿ 6 ಮತ್ತು 10ನೇ ರ‌್ಯಾಂಕ್ ಪಡೆದಿದ್ದಾರೆ ಎಂದು ಪ್ರಾಚಾರ್ಯ ಡಾ. ಶ್ರೀಪತಿ ನಾಗೋಳ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net