ಶ್ರೀ ರಂಭಾಪುರಿ ಜಗದ್ಗುರುಗಳಿಂದ ಸ್ಥಳ ವೀಕ್ಷಣೆ

2Bk2
ಬಸವಕಲ್ಯಾಣದಲ್ಲಿ ಸೆ.೨೨ರಿಂದ ನಡೆಯುವ ಶರನ್ನವರಾತ್ರಿ ದಸರಾ ದರ್ಬಾರ್ ಹಿನ್ನೆಲೆಯಲ್ಲಿ ಭಾನುವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸ್ಥಳ ವೀಕ್ಷಿಸಿದರು. ಶಾಸಕ ಶರಣು ಸಲಗರ, ಸುನೀಲ ಪಾಟೀಲ, ಎ.ಜಿ.ಪಾಟೀಲ, ಡಾ.ಬಸವರಾಜ ಸ್ವಾಮಿ, ವೀರಣ್ಣ ಶೀಲವಂತ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ ಇತರರಿದ್ದರು.
Published on

ಬಸವಕಲ್ಯಾಣ: ನಗರದಲ್ಲಿ ಸೆ.೨೨ರಿಂದ ಅ.೨ರವರೆಗೆ ಶರನ್ನವರಾತ್ರಿ ದಸರಾ ದರ್ಬಾರ್ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಸದ್ಭಕ್ತರು ನಿರ್ಧರಿಸಿದ್ದು, ಪೂರ್ವಭಾವಿಯಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಭಾನುವಾರ ನಗರಕ್ಕೆ ಆಗಮಿಸಿ ಬಿಕೆಡಿಬಿ ಯಾತ್ರಿ ನಿವಾಸ, ಸಭಾ ಭವನ, ಕಲ್ಯಾಣ ಮಂಟಪ ಮತ್ತು ಅಕ್ಕಮಹಾದೇವಿ ಕಾಲೇಜು ಮೈದಾನ ವೀಕ್ಷಿಸಿದರು.

ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಪ್ರಮುಖರಾದ ಸುನೀಲ ಪಾಟೀಲ, ಸೋಮಶೇಖರ ವಸ್ತçದ, ಎ.ಜಿ. ಪಾಟೀಲ, ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ನಂದಿ, ಗುರುಲಿಂಗಯ್ಯ ಕಟಗಿಮಠ, ಚಂದ್ರಶೇಖರ ಪಾಟೀಲ, ಸುರೇಶ ಸ್ವಾಮಿ, ವೀರಣ್ಣ ಶೀಲವಂತ, ಪ್ರೊ.ದಯಾನಂದ ಶೀಲವಂತ, ರೇವಣಸಿದ್ಧಯ್ಯ ಮಠಪತಿ, ಪ್ರೊ.ಸೂರ್ಯಕಾಂತ ಶೀಲವಂತ, ಡಾ.ಬಸವರಾಜ ಸ್ವಾಮಿ, ರಾಕೇಶ ಪುರವಂತ, ರಮೇಶ ರಾಜೋಳೆ, ಬಸಲಿಂಗಯ್ಯ ಶಂಕರಗುಡಿ, ಡಾ.ರಾಚಯ್ಯ ಮಠಪತಿ, ಪ್ರೊ.ರುದ್ರೇಶ್ವರ ಗೋರ್ಟಾ, ಕಲ್ಪನಾ ಶೀಲವಂತ, ಅಂಜನಾ ಮೂಲಗೆ, ಸರೋಜನಿ ಹಿರೇಮಠ, ಶ್ರೀದೇವಿ ಚಿರಡೆ, ಸಿದ್ದಮ್ಮ ರಾಜೋಳೆ ಇದ್ದರು.

ಇದಕ್ಕೂ ಮುನ್ನ ಜಗದ್ಗುರುಗಳು ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟಿರುವ ಗುಂಡುರಾಜ ಬಿರಾದಾರ ಮನೆಗೆ ಭೇಟಿ ನೀಡಿ ಪರಿವಾರದವರಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net