

ಎನ್.ಆರ್.ಪುರ: ಪಟ್ಟಣದ ಶ್ರೀ ಕೋಟೆ ಮಾರಿಕಾಂಬೆ ಜಾತ್ರಾ ಮಹೋತ್ಸವ ಮೇ 20, 21 ಮತ್ತು 22 ರಂದು ನಡೆಯಲಿದೆ.
ಜಾತ್ರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಧ್ವಜಾರೋಹಣ ಮಾಡಿ, ಸಾರ ಹಾಕುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ದೇವಿಯ ವಿಗ್ರಹ ಕೆತ್ತನೆಗೆ ಬೇಕಾದ ಮರಗಳನ್ನು ತರಲು ಮಂಗಳವಾರ ಬೆಳಗ್ಗೆ ಶ್ರೀ ಕೋಟೆ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರು ಮಾರಿ ಗಣಮಗನೊಂದಿಗೆ ತಮಟೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಕಾಡಿಗೆ ಸಾಗಿದರು. ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಪದಾಧಿಕಾರಿಗಳಾದ ಪ್ರಶಾಂತ್ ಎಲ್. ಶೆಟ್ಟಿ, ಮಂಜುಪೆರುಮಾಳ್, ಎಚ್.ಎನ್.ರವಿಶಂಕರ್, ಮಾವಿನಮನೆ ಮಂಜು, ಸುನೀಲ್‌ಕುಮಾರ್, ಸುರಭಿರಾಜೇಂದ್ರ, ಎನ್.ಎಂ.ಕಾರ್ತಿಕ್, ಮೂರ್ತಿ, ಮಂಜುನಾಥ, ರಘು, ಮೇದರಬೀದಿ ಶ್ರೀನಾಥ್, ಸೋಮಶೇಖರ್, ಮನೋಜ್, ಸುಮಂತ್, ಪ್ರಸಾದ್, ಶರವಣ, ಸುನೀಲ್ ಇತರರಿದ್ದರು.