

ಕಲಬುರಗಿ: ಆಷಾಢ ಶುದ್ಧ ಗುರು ಪರ‍್ಣಿಮೆ ದಿನ ಜು.೧೦ರಂದು ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ೯೨ನೇ ಜನ್ಮದಿನೋತ್ಸವ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾತಾಜಿ ಟ್ರಸ್ಟ್ ಸದಸ್ಯ ಸಿದ್ರಾಮಪ್ಪ ಸಣ್ಣೂರ ತಿಳಿಸಿದರು.
ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಜು.೧೦ರಂದು ಬೆಳಗ್ಗೆ ೯ ಗಂಟೆಗೆ ಮಾತಾಜಿ ಅವರಿಗೆ ಮಹಾರುದ್ರಾಭಿಷೇಕ, ಪಾದ ಪೂಜೆ ನೆರವೇರಲಿದೆ. ಸಂಜೆ ೭ಕ್ಕೆ ರಥೋತ್ಸವ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನ್ಮದಿನೋತ್ಸವದಲ್ಲಿ ರ‍್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಲಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಎಲ್ಲ ಭಕ್ತರಿಗೆ ಮಹಾದಾಸೋಹ ವ್ಯವಸ್ಥೆ, ವಿವಿಧೆಡೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿದ್ದು, ಸೂಕ್ತ ರಕ್ಷಣೆ, ಭದ್ರತೆಗೆ ಪೊಲೀಸರನ್ನು ಕೋರಿದ್ದು, ವಿಶೇಷ ರಕ್ಷಣೆ ಇರಲಿದೆ ಎಂದು ತಿಳಿಸಿದರು.
ಟ್ರಸ್ಟ್ ಕರ‍್ಯರ‍್ಶಿ ಶಿವಯ್ಯ ಸ್ವಾಮಿ, ಪ್ರಮುಖರಾದ ಸರ‍್ಯಕಾಂತ ಅವರಾದ, ರಾಜು ಸೊನ್ನ, ಮಾಣಿಕ ರಾಜ, ಶಿವಶಂಕರ ಇತರರಿದ್ದರು.