

ಹುಮನಾಬಾದ್: ಮಾಣಿಕನಗರದ ಶ್ರೀಮಾಣಿಕ ಪ್ರಭು ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ಬುಧವಾರ ಶ್ರೀ ಮಾಣಿಕ ಪ್ರಭುಗಳವರ ೧೫೯ನೇ ಪುಣ್ಯತಿಥಿಯ ಕಾರ್ಯಕ್ರಮ ಧಾರ್ಮಿಕ ಪೂಜೆ ವಿಧಿವಿಧಾನಗಳೊಂದಿಗೆ ಜರುಗಿತು.
ಬೆಳಗ್ಗೆ ಕಾಕಡಾರತಿ, ಶ್ರೀಮಾಣಿಕ ಪ್ರಭು ಸಂಜೀವಿನಿ ಸಮಾಧಿಗೆ ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭುಗಳ ನೇತೃತ್ವದಲ್ಲಿ ವೈದಿಕ ವೃಂದ ಹಾಗೂ ವೇದ ಪಾಠ ಶಾಲೆ ವಿದ್ಯಾರ್ಥಿಗಳಿಂದ ಮಹಾರುದ್ರಾಭೀಷೇಕ, ಮಹಾಮಂಗಳಾರತಿ ನೆರವೇರಿತು. ನಂತರ ರಾಜೋಪಚಾರ ಮಹಾಪೂಜೆ ಜರುಗಿದವು. ನಾಲ್ಕು ವೇದಗಳು, ಶಾಸ್ತ್ರ, ಪ್ರರಾಣ, ಸಂಗೀತ, ಕೀರ್ತನ ವ್ಯಾಕರಣಾದಿ ಸೇವೆಗಳನ್ನು ಶ್ರೀ ಪ್ರಭುಗಳಿಗೆ ಅರ್ಪಿಸಲಾಯಿತು. ಪ್ರಭು ಆರಾಧನಾ ಮಹೋತ್ಸವ ಜರುಗಿತು. ಪುಣ್ಯತಿಥಿಯ ಪೂರ್ವ ಪಂಕ್ತಿ ನಂತರ ವಸ್ತ್ರದಾನ ದಕ್ಷಿಣೆಯಿಂದ ವೈದಿಕರನ್ನು ಪೂಜಿಸಲಾಯಿತು. ಪ್ರದೋಷ ಪೂಜಾ ನಂತರ ಮಹಾಪ್ರಸಾದ ಜರುಗಿತು.
ವಿವಿಧಡೆಯಿಂದ ಆಗಮಿಸಿದ ಅಪಾರ ಭಕ್ತರು ದರ್ಶನ ಪಡೆದರು. ಸಂಸ್ಥಾನದ ಆನಂದರಾಜ ಪ್ರಭು, ಚೇತನರಾಜ ಪ್ರಭು ಸೇರಿ ಭಕ್ತರು ಇದ್ದರು.
ಉತ್ಸವ ನಿಮಿತ್ತ ಗುರುವಾರ ಮಂದಿರದಲ್ಲಿ ಶ್ರೀ ಪ್ರಭು ದ್ವಾದಶಿ ಕಾರ್ಯಕ್ರಮದ ಪ್ರಯುಕ್ತ ನಾನಾ ಧಾರ್ಮಿಕ ಪೂಜೆ ಕಾರ್ಯಕ್ರಮ ನಡೆಯಲಿವೆ.