

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಕಲ್ಕತ್ತದೇವಿ (ಶ್ರೀ ಮಹಾಲಕ್ಷಿö್ಮÃ)ಯ ಐದು ದಿನದ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಬಡಿಗೇರ ಮನೆಯಲ್ಲಿ ದೇವಿ ಪ್ರತಿಷ್ಠಾಪನೆ ಮೂಲಕ ವೈಭವದ ಚಾಲನೆ ದೊರೆಯಿತು. ದೇವಿ ದರ್ಶನಕ್ಕೆ ಬುಧವಾರದಿಂದ ಭಕ್ತ ಸಾಗರ ಹರಿದು ಬರುತ್ತಿದೆ.
ಭಕ್ತರ ಇಷ್ಟಾರ್ಥ ಪೂರೈಸುವ ಮಹಾಲಕ್ಷಿö್ಮÃ ಜಾತ್ರೆ ತನ್ನದೇಯಾದ ವೈಶಿಷ್ಟÈ ಹೊಂದಿದೆ. ಕರ್ನಾಟಕ ಸೇರಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟçಗಳಿಂದ ಅಸಂಖ್ಯ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಕೃತಾರ್ಥರಾಗಲಿದ್ದಾರೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸಮಿತಿ ತೀರ್ಮಾನಿಸಿದೆ.
ಬುಧವಾರ ಬಡಿಗೇರ ಮನೆಯಲ್ಲಿ ಭಜನೆ ಸೇರಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗುರುವಾರ ಚಿಕ್ಕಜೇವರ್ಗಿಯಿಂದ ಮಂಟಪ ಬರಲಿದೆ. ರಾತ್ರಿ 9ರಿಂದ ಬೆಳಗ್ಗಿನ ಜಾವ 4ರವರೆಗೆ ಬಡಿಗೇರ ಮನೆಯಿಂದ ನಡುಗಟ್ಟೆಗೆ (ಮಹಾಲಕ್ಷಿö್ಮÃ ದೇವಸ್ಥಾನ) ದೇವಿಯ ಆಗಮನವಾಗುತ್ತದೆ. ಶುಕ್ರವಾರ ಗ್ರಾಮಸ್ಥರಿಂದ ದೇವಿಗೆ ನೈವೇದ್ಯ ಹಾಗೂ ಅನ್ನ ಸಂತರ್ಪಣೆ, ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸಹಸ್ರಾರು ಭಕ್ತರ ಜೈಘೋಷಗಳ ಮಧ್ಯೆ ದೇವಿಯ ರಥೋತ್ಸವ ನೆರವೇರಲಿದೆ.