

ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಹುಂಡಿ ಹಣವನ್ನು ತಹಸೀಲ್ದಾರ್ ಉಪಸ್ಥಿತಿಯಲ್ಲಿ ಎಣಿಸಲಾಯಿತು. ನಾಲ್ಕು ತಿಂಗಳಿನಿಂದ ಹುಂಡಿಯಲ್ಲಿ ಒಟ್ಟು 9,37,895 ರೂ. ಸಂಗ್ರಹವಾಗಿತ್ತು. ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ದೇವಸ್ಥಾನದ ಕಾರ್ಯನಿರ್ವಹಣಾಕಾರಿ ಪ್ರಮಿಳಾಕುಮಾರಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ, ಮಂಜುನಾಥ್, ಚಂದ್ರಶೇಖರ್, ಶ್ರೀಧರ ಇತರರಿದ್ದರು.