ಕೊಳ್ಳೇಗಾಲ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.7 ರಂದು ಮಾಡೋಣ, ಎಲ್ಲರೂ ಸಹಕರಿಸಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಮುಖಂಡರಾದ ಕೊಪ್ಪಾಳಿ ಮಹದೇ ವನಾಯಕ, ಚಿಕ್ಕಮಾದನಾಯಕ, ಶಂಕರನಾ ಯಕ, ಪಾಳ್ಯ ಕೃಷ್ಣ, ಕುನ್ನನಾಯಕ ಮಾತನಾಡಿ, ಸುಮಾರು ವರ್ಷ ಗಳಿಂದಲೂ ವಾಲ್ಮೀಕಿ ಜಯಂತಿ ಕಾರ್ಯ ಕ್ರಮವನ್ನು ಅದ್ದೂರಿಯಾಗಿ ಸರ್ಕಾರದ ವತಿಯಿಂದ ಮಾಡಿಲ್ಲ, ಈ ವರ್ಷ ಅದ್ದೂರಿಯಾಗಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುವ ಸಂಬಂಧ ಕಟ್ಟೆ, ಗಡಿ, ಕಸಬಾ ಯಜಮಾನರುಗಳೂ ಮತ್ತು ಮುಖಂ ಡರುಗಳನ್ನು ನಾವು ಪ್ರತ್ಯೇಕವಾಗಿ ಸಭೆ ನಡೆಸಿ ತೀರ್ಮಾನ ಕೈಗೊಂಡು ನಮ್ಮ ತೀರ್ಮಾನವನ್ನು ಹೇಳುತ್ತೇವೆಂದು ಶಾಸಕರ ಗಮನಕ್ಕೆ ತಂದರು.
ನಾಯಕರ ಸಂಘದ ಅದ್ಯಕ್ಷ ಜಗದೀಶ್ ಮಾತನಾಡಿ, ನಮ್ಮ ಕಟ್ಟೆ ಮತ್ತು ಗಡಿ, ಕಸಬಾ ಯಜಮಾನರುಗಳ ಸಭೆ ನಡೆಸಿ ಜಯಂತಿಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದನ್ನು ಚರ್ಚೆ ನಡೆಸಿ ನಾವು ತಿಳಿ ಸುತ್ತೇವೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಡಬೇಕೆಂದು ಶಾಸಕರು ಹಾಗೂ ತಾಲೂ ಕು ಆಡಳಿತಕ್ಕೆ ಮನವಿ ಮಾಡಿಕೊಂಡರು. ಬಳಿಕ ನಂತರ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸರ್ಕಾರ ನಿಗದಿಪಡಿಸಿರುವ ಅ.7 ರಂದು ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನೇ ಅಂದೇ ಮಾಡಿದರೆ ಅದಕ್ಕೆ ಕಳೆ ಬರುತ್ತದೆ. ಇದನ್ನು ಮನಸ್ಸಿನಲ್ಲಿ ಟ್ಟು ಕೊಂಡು ತೀರ್ಮಾನ ಕೈಗೊಂಡು ನಮಗೆ ತಿಳಿಸಿ ಎಂದು ಶಾಸಕರು ಹೇಳಿದರು.
ಗ್ಯಾರಂಟಿ ಅನುಷ್ಠಾನ ಯೋ ಜನೆ ಯ ಜಿಲ್ಲಾ ಅಧ್ಯಕ್ಷ ಚಂದ್ರು, ತಾಲೂಕು ಅಧ್ಯಕ್ಷ ರಾಜೇಂದ್ರ, ತಹಸಿಲ್ದಾರ್ ಬಸವರಾಜು, ತಾಪಂ ಇಒ ಗುರು ಶಾಂತಪ್ಪ, ಬಿಇಒ ಮಂಜುಳ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್, ಪೌರಯುಕ್ತ ಎ.ರಮೇಶ್, ಸಿಡಿಪಿಒ ಅಂಬಿಕಾ ಇತರರು ಇದ್ದರು.