

ಕಾಳಗಿ: ಬೆಣ್ಣೆತೊರಾ ಜಲಾಶಯದ ದಡದಲ್ಲಿರುವ ಕನ್ನಡಗಿ ಗ್ರಾಮದಲ್ಲಿ ಶ್ರಾವಣ ಎರಡನೇ ಸೋಮವಾರದಂದು ಅಪಾರ ಭಕ್ತರ ಜೈಘೋಷ ಮಧ್ಯೆ ಅದ್ದೂರಿಯಾಗಿ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ನಸುಕಿನ ಜಾವ 3ಕ್ಕೆ ಅರ್ಚಕ ನಾಗಯ್ಯಸ್ವಾಮಿ ಹೆಬ್ಬಾಳ ನೇತೃತ್ವದಲ್ಲಿ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿAದ ಪಲ್ಲಕ್ಕಿ ಉತ್ಸವ ಜರುಗಿತು. ದಾರಿಯುದ್ದಕ್ಕೂ ಭಕ್ತರು ಪಲ್ಲಕ್ಕಿ ಹೂಮಳೆ ಸುರಿಸಿದರು. ವಿವಿಧ ವಾದ್ಯಗಳು ಹಾಗೂ ಭಜನೆ, ಪುರವಂತರ ಕುಣಿತ ಗಮನಸೆಳೆಯಿತು. ಜನರು ಮಲ್ಲಿಕಾರ್ಜುನ ಮಹಾರಾಜ್ ಕಿ ಜೈ.. ಹರಹರ ಮಹಾದೇವ.. ಜೈ ಮಲ್ಲಿಕಾರ್ಜುನ ಸೇರಿ ಇನ್ನಿತರ ಜೈಘೋಷ ಮೊಳಗಿದವು.
ದೇವಸ್ಥಾನ ಸಮಿತಿ ಅಧ್ಯP್ಷÀ ಸುಭಾಶಚಂದ್ರ ಮಾಲಿಪಾಟೀಲ್, ಪ್ರಮುಖರಾದ ಬಸವರಾಜ ಪಾಟೀಲ್ ಹೇರೂರ, ಸಿದ್ದಣ್ಣ ತಳವಾರ, ರಾಜು ಕನ್ನಡಗಿ, ಶಾಮರಾಯ ಕನ್ನಡಗಿ, ಗುರುಲಿಂಗಪ್ಪ ಪಾಟೀಲ್, ಮಲ್ಲಿನಾಥ ಕನ್ನಡಗಿ, ಡಾ.ಧರ್ಮರಾಜï ಪಾಟೀಲ್, ಸಚಿನ್ ಪಾಟೀಲ್, ಎಚ್.ಬಿ.ಪಾಟೀಲ್, ಶಿವಕುಮಾರ ಪಾಟೀಲ್, ಚನ್ನವೀರಪ್ಪ ಪಾಟೀಲ್, ಅಂಬರೀಶ ಟೆಂಗಳಿ, ಆನಂದ ಚನ್ನೂರ ಸೇರಿ ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣದಿAದ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಳಗಿ ಪಿಎಸ್‌ಐ ತಿಮ್ಮಯ್ಯ ಬಿಕೆ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.