ಶ್ರೀ ಮಲ್ಲಿಕಾರ್ಜುನ ಮಹಾರಾಜ್‌ಕಿ ಜೈ..

0408 KALAGI 01
ಕಾಳಗಿ ತಾಲೂಕಿನ ಕನ್ನಡಗಿಯಲ್ಲಿ ಶ್ರಾವಣ ಎರಡನೇ ಸೋಮವಾರದಂದು ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿAದ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
Published on

ಕಾಳಗಿ: ಬೆಣ್ಣೆತೊರಾ ಜಲಾಶಯ ದಡದಲ್ಲಿರುವ ಕನ್ನಡಗಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ನಿಮಿತ್ತ ಶ್ರಾವಣ ಎರಡನೇ ಸೋಮವಾರದಂದು ಸಂಭ್ರಮದಿAದ ಪಲ್ಲಕ್ಕಿ ಮಹೋತ್ಸವ ನಡೆಯಿತು.

ನಸುಕಿನ ಜಾವ ೩ಕ್ಕೆ ಶ್ರೀ ಮಲ್ಲಿಕಾರ್ಜುನ ದೇವರ ಮೂಲ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಕೃತಾರ್ಥರಾದರು.

ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಭಕ್ತರು ಭಜನೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ಶ್ರೀ ಮಲ್ಲಿಕಾರ್ಜುನ ದೇವರ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಲಾಯಿತು. ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲು ಭವ್ಯ ಮೆರವಣಿಗೆ ಜರುಗಿತು. ಭಕ್ತರಿಂದ `ಕನ್ನಡಗಿ ಮಹಾರಾಜ ಕಿ ಜೈ'.. ಹರಹರ ಮಹಾದೇವ.. ಶ್ರೀ ಮಲ್ಲಿಕಾರ್ಜುನ ಮಹಾರಾಜ್‌ಕಿ ಜೈ.. ಸೇರಿ ವಿವಿಧ ಘೋಷಣೆಗಳು ಮೊಳಗಿದವು.

ದೇವಸ್ಥಾನ ಸಮಿತಿ ಅಧ್ಯP್ಷÀ ಸುಭಾಶ್ಚಂದ್ರ ಮಾಲಿಪಾಟೀಲ್, ಪ್ರಮುಖರಾದ ಬಸವರಾಜ ಪಾಟೀಲ್ ಹೇರೂರ, ಸಿದ್ದಣ್ಣ ತಳವಾರ, ಚನ್ನವೀರಪ್ಪ ಮಾಲಿಪಾಟೀಲ್, ವಿಜಯಕುಮಾರ ಮಾಲಿಪಾಟೀಲ್, ರಾಜು ಕನ್ನಡಗಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ್, ಮಲ್ಲಣ್ಣ ನಾಯ್ಕೋಡಿ, ಶಾಂತಕುಮಾರ ಕನ್ನಡಗಿ, ಎಚ್.ಬಿ.ಪಾಟೀಲ್, ಮಲ್ಲಿಕಾರ್ಜುನ ವಕೀಲ ಹಾಗೂ ಕಲಬುರಗಿ, ಹೇರೂರ (ಕೆ), ನಾಗೂರ, ಶೆಳ್ಳಗಿ, ಸಾವತಖೇಡ, ಜೀವನ ಮಾರಡಗಿ, ಹೆಬ್ಬಾಳ ಸೇರಿ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪಿಎಸ್‌ಐ ತಿಮ್ಮಯ್ಯ ಬಿ.ಕೆ. ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net