ಶ್ರೀ ಮಲೆನಾಡ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಂಪನ್ನ

CTD DEVI==-
Published on

ಚಿತ್ರದುರ್ಗ: ನಗರದ ಬುರುಜನಹಟ್ಟಿ ಶ್ರೀ ಮಲೆನಾಡ ಚೌಡೇಶ್ವರಿ ದೇವಿ ಗಂಗಾಪೂಜೆ ಮತ್ತು ಕಡೇ ಕಾರ್ತಿಕ ಜಾತ್ರಾ ಮಹೋತ್ಸವ ಭಾನುವಾರ ಸಮಾಪನಗೊಂಡಿತು. ಮಹೋತ್ಸವದ ಅಂಗವಾಗಿ ಗರ್ಭಗುಡಿ ದೇವಿ ಹಾಗೂ ಉತ್ಸವಮೂರ್ತಿಗಳಿಗೆ ಮನಮೋಹಕವಾಗಿ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯಿತು.

ಐದು ದಿನಗಳ ಈ ಮಹೋತ್ಸವದಲ್ಲಿ ಪಂಚಾಮೃತ ಅಭಿಷೇಕ,ಮಂಗಳಸ್ಥಾನ,ಗೋ ಪೂಜೆ,ಅಮ್ಮನವರಿಗೆ ಕಂಕಣಧಾರಣೆ, ಮದುವಣ ಗಿತ್ತಿ ಶಾಸ್ತ್ರ,ಮಹಾಮಂಗಳಾರತಿ ನೆರವೇರಿಸಿದ ಬಳಿಕ ಕೋಟೆ ಕರುವರ್ತಿ ಈಶ್ವರ ದೇವ ಸ್ಥಾನದ ಪುಷ್ಕರಣಿಯಲ್ಲಿ ಗಂಗಾ ಪೂಜೆ ಮತ್ತು ಕುಂ ಭ ಪೂಜೆ ನೆರವೇರಿಸಿದ ಬಳಿಕ ಹೂವಿನ ಅಲಂಕಾರ ಮತ್ತು ಜಾನಪದ ಕಲಾವಾದ್ಯಗ ಳೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು.

ಉರುಮೆ,ಡೊಳ್ಳು, ವೀರಗಾಸೆ, ಬೊಂಬೆ ಕುಣಿತ, ಸೇರಿದಂತೆ ಜಾನಪದ ಕಲಾ ಮೇಳಗಳು ಮೆರಣಿಗೆಗೆ ಮೆರುಗು ನೀಡಿದವು. ದೇವಿಗೆ ಉಯ್ಯಲೋತ್ಸವ, ಮಹಾಮಂಗಳಾರತಿ ನಂತರ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು. ಮಹೋತ್ಸವದ ಅಂಗವಾಗಿ ರಂಗೋಲಿ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net