ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

11 HANUR 3
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಪಟ್ಟಣದಲ್ಲಿ ಮಾ.24 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತಮಟೆ ಸಾರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಸುಸೂತ್ರ ಜಾತ್ರಾ ಮಹೋತ್ಸವ ನಡೆಯುವ ಸಲುವಾಗಿ ಮಧ್ಯಾಹ್ನ ಪಟ್ಟಣದ ವಿವಿಧ ಕೋಮಿನ ಮುಖಂಡರು ದೇಗುಲಕ್ಕೆ ಆಗಮಿಸಿ, ಚರ್ಚೆ ನಡೆಸಿ, ಜಾತ್ರೆಯ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡರು. ಈ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪ್ರತಿಯೊಬ್ಬರೂ ಜಾತ್ರಾ ಮಹೋತ್ಸವಕ್ಕೆ ಸಹಕರಿಸಬೇಕು ಎಂದು ತಿಳಿಸಲಾಯಿತು.

ಮುಖಂಡರ ಸಮ್ಮುಖದಲ್ಲಿ ಅರ್ಚಕ ರಾಜೋಜಿರಾವ್ ಶಿಂಧೆ ಅವರು ದೇವಿಗೆ ಹಾಗೂ ತಮಟೆಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ನಿಯೋಜಿಸಲ್ಪಟ್ಟ ರಂಗದ ತೋಟಿಗೆ ತಮಟೆಯನ್ನು ಹಸ್ತಾಂತರಿಸಲಾಯಿತು. ರಂಗದತೋಟಿ ಪಟ್ಟಣಾದ್ಯಂತ ಸಂಚರಿಸಿ ಮುಂದಿನ 15 ದಿನಗಳಲ್ಲಿ ದೇವಿಯ ಜಾತ್ರೆ ನಡೆಯಲಿದ್ದು, ಪ್ರತಿಯೊಬ್ಬರೂ ಸಜ್ಜಾಗುವಂತೆ ಕರೆ ನೀಡಿದರು.

ವಿಶೇಷ ಪೂಜೆ: ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ದೇಗುಲದಲ್ಲಿ ಬೆಳಗ್ಗೆ 5ರಲ್ಲಿ ದೇವಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಪನ್ನೀರು, ಗಂಧ, ಅರಿಶಿಣ ಹಾಗೂ ಕುಂಕುಮದಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇಗುಲದ ವತಿಯಿಂದ ಅನ್ನದಾಸೋಹ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ದೇಗುಲವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net