ಶ್ರೀ ಬೂದಿಬಸವೇಶ್ವರ ಸ್ವಾಮಿ ಕೆಂಡೋತ್ಸವ

TKE (B HALLI)
ಬೇಲೇನಹಳ್ಳಿಯಲ್ಲಿ ಶ್ರೀ ಬೂದಿಬಸವೇಶ್ವರ ಸ್ವಾಮಿಯ ಕೆಂಡೋತ್ಸವ ನೆರವೇರಿತು.
Published on

ತರೀಕೆರೆ: ಬೇಲೇನಹಳ್ಳಿ ಶ್ರೀ ಬೂದಿಬಸವೇಶ್ವರ ಸ್ವಾಮಿ ಕೆಂಡೋತ್ಸವ ಮಂಗಳವಾರ ನೆರವೇರಿತು.

ಮುಂಜಾನೆ ಶ್ರೀ ಬೂದಿ ಬಸವೇಶ್ವರ ಸ್ವಾಮಿ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಮುತ್ತೈದೆಯರು ಕಳಸ ಪೂಜಿಸಿ ಹೊತ್ತುತಂದ ಗಂಗೆಯಿಂದ ದೇವರಿಗೆ ತೀರ್ಥಸ್ನಾನ ಮಾಡಿಸಿ ಎಳನೀರು, ಹಾಲು, ತುಪ್ಪ, ಮೊಸರು, ಜೇನುತುಪ್ಪ ಸೇರಿ ಸುಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ 10.30ಕ್ಕೆ ಹಿರೇಕಾತೂರು ಏಕನಾಥ ಯಲ್ಲಮ್ಮ ದೇವಿ ಹಾಗೂ ಶ್ರೀ ಬೂದಿ ಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ವಿಧಿವಿಧಾನ ನೆರವೇರಿಸಿದ ನಂತರ ಭಕ್ತರು ಕೊಂಡ ಹಾಯ್ದರು. ಈ ವೇಳೆ ಸ್ಥಳೀಯ ಕಲಾವಿದರು ವೀರಗಾಸೆ ಪ್ರದರ್ಶಿಸಿದರು. ರಾತ್ರಿ ಗ್ರಾಮದ ರಾಜಬೀದಿಗಳಲ್ಲಿ ಉಭಯ ದೇವರ ಉತ್ಸವ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net