

ಚಿತ್ರದುರ್ಗ:ವೀರಶೈವ ಸಮಾಜ ಹಾಗೂ ಜಿಲ್ಲಾಡಳಿತದಿಂದ ನಗರದಲ್ಲಿ ಬುಧವಾರ ವಿಶ್ವ ಗುರು,ಮಹಾಮಾನವತಾವಾದಿ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. ವೈವಿಧ್ಯಮಯ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ನಗರದ ಶ್ರೀ ನೀಲಕಂಠೇಶ್ವರ ದೇವಾಲಯದ ಬಳಿ ಅಲಕೃಂತ ರಥದಲ್ಲಿದ್ದ ಬಸವೇಶ್ವರ ಭಾವಚಿತ್ರಕ್ಕೆ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ದೊರೆಯಿತು.
ಗಾಂಧಿವೃತ್ತ, ಆನೆಬಾಗಿಲು,ಚಿಕ್ಕಪೇಟೆ,ಉಚ್ಚಂಗಿಯಲ್ಲಮ್ಮ ದೇವಾಲಯ,ದೊಡ್ಡಪೇಟೆ, ರಂಗಯ್ಯನಬಾಗಿಲು,ಬಸವಮಂಟಪ,ಗು ರುಭವನ,ಡಾ.ಬಿ.ಆರ್.ಅಂಬೇಡ್ಕರ್‌ವೃತ್ತ,ಮಹಾವೀರವೃತ್ತ, ಎಸ್‌ಬಿಎಂವೃತ್ತದ ಮೂಲಕ ಬಿಡಿರಸ್ತೆಯಲ್ಲಿ ಸಾಗಿ ಮರಳಿ ನೀಲ ಕಂಠೇಶ್ವರ ದೇವಾಲಯವನ್ನು ತಲುಪಿತು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತಿತರ ಗಣ್ಯರು,ಮುರುಘಾಮಠ,ವೀರಶೈವ ಸಮಾಜದ ವಿವಿಧ ಸಂ ಘಟನೆಗಳು,ಜಂಗಮ ಸಮಾಜ,ಅಖಿಲ ಭಾರತ ವೀರಶೈವ ಮಹಾಸಭಾ,ಪಂಚ ಮಸಾಲಿ ಸಂಘ,ಸಾಧು-ಸದ್ಧರ್ಮ,ಶಿವಸಿಂಪಿ,ಗಾಣಿಗ, ಕುಂಚಿಟಿಗ,ಹೇಮರಡ್ಡಿ ಮಲ್ಲಮ್ಮ,ಕುಂಬಾರ,ಹಡಪದ,ನೊಳಂಬ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು ಸಾರ್ವಜನಿಕರು ಇದ್ದರು.