ಶ್ರೀ ಬಸವೇಶ್ವರ ಮಹಾರಾಜಕೀ ಜೈ

0905 DORANAHALLI 01
Published on

ದೋರನಹಳ್ಳಿ: ಶ್ರೀ ಬಸವೇಶ್ವರ ಮಹಾರಾಜಕೀ ಜೈ ಘೋಷದೊಂದಿಗೆ ಗುರುವಾರ ಸಂಜೆ ಅಪಾರ ಭಕ್ತರ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು. ರಥೋತ್ಸವದ ಉದ್ದಕ್ಕೂ ಡೊಳ್ಳು ಬಡಿತ, ಭಾಜಾ ಭಜಂತ್ರಿ, ಹಲಗೆ ನಾದಗಳ ನೋಡುಗರ ಗಮನ ಸೆಳೆಯಿತು.

ಗ್ರಾಮದ ಅಂಭಾ ಭವಾನಿ ಜಾತ್ರೆ ನಿಮಿತ್ತ ಶ್ರೀ ಬಸವೇಶ್ವರ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜರುಗಿತು. ಬುಧವಾರ ಸಂಜೆ ಭೀಮಾನದಿ ಗಂಗಾಸ್ನಾನದಿAದ ಬಂದ ಪಲ್ಲಕ್ಕಿ ರಾತ್ರಿಯಿಡಿ ದೀಪ, ಡೊಳ್ಳು, ಭಾಜಾ ಭಜಂತ್ರಿ, ಹಲಗೆ ಮೇಳಗಳೊಂದಿಗೆ ಸಂಭ್ರಮದ ಮೆರವಣಿಗೆ ಆಯಿತು. ಗುರುವಾರ ಬೆಳಗ್ಗೆ ಭಕ್ತರಿಂದ ಪೂಜೆ ನೈವೇದ್ಯ ಸಮರ್ಪಿಸಲಾಯಿತು. ಸಂಜೆ ೬ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜೈಘೋಷಗಳ ಮೂಲಕ ರಥೋತ್ಸವ ನಡೆಯಿತು.

ಹಿರೇಮಠದ ಶ್ರೀ ಅಭಿನವ ಮಹಾಂತೇಶ್ವರ ಶಿವಾಚಾರ್ಯ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಿz್ದÁಶ್ರಮದ ಭೀಮಾನಂದ ಅವಧೂತರು ರಥಕ್ಕೆ ಚಾಲನೆ ನೀಡಿದರು. ಯಾವುದೆ ಅಡೆತಡೆ ಇಲ್ಲದೆ ಹೂವಿನಂತೆ ತೆರನ್ನು ಭಕ್ತರ ಯುವ ಸಮೂಹ ಎಳೆದು ಸಂಭ್ರಮಿಸಿದರು. ನಂತರ ಜಾತ್ರೆಗೆ ಆಗಮಿಸಿದ್ದ ಭಕ್ತ ಸಮೂಹವು ಜಿಲೆಬಿ, ಭಜಿ, ಫರಾಳ, ಬೆಂಡು, ಬತ್ತಾಸು, ಆಟಿಕೆ ಸಾಮಾನು, ಹೆಣ್ಣು ಮಕ್ಕಳು ಬಳೆ, ಅಲಂಕಾರಿಕ ವಸ್ತುಗಳು ಖರೀದಿಯಲ್ಲಿ ತಲ್ಲೀನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net