ಶ್ರೀ ಬಸವೇಶ್ವರ ಜಾತ್ರೆ ಇಂದಿನಿಂದ

web1
ಜಾಲಿಕಟ್ಟಿ-ಜೀವಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ.
Published on

ಬೆನಕಟ್ಟಿ: ಕರ್ನಾಟಕ ಬಹುಸಂಖ್ಯಾತ ಭಕ್ತರ ಆರಾಧ್ಯ ದೈವ ಜಾಲಿಕಟ್ಟಿ-ಜೀವಾಪುರ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಸೆ.11ರಿಂದ 14ರ ವರೆಗೆ ಜರುಗಲಿದ್ದು, ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುಂಗಾರು ಮಳೆಯ ಸಿಂಚನದಿಂದ ಹಸಿರು ಮೈಸಿರಿ ಹೊದ್ದುಕೊಂಡಿರುವ ಗುಡ್ಡಗಳಲ್ಲಿ ಕುರುಚಲು ಗಿಡ-ಮರಗಳ ಮಧ್ಯೆ ಉದ್ಭವಗೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಹೋದರೆ ಕಡಿದಾದ ಗುಡ್ಡಗಳು ಹಸಿರುಮಯವಾಗಿ ಗೋಚರಿಸುತ್ತದೆ. ಕಲ್ಲು ಬಂಡೆಗಳ ರಾಶಿಯ ಬೆಟ್ಟದ ತುದಿಗೆ ಕಾಲಿಡುತ್ತಿದ್ದಂತೆ ಯಾತ್ರಿಕರಿಗೆ ಮನೋಲ್ಲಾಸ ನೀಡುತ್ತಿರುವ ಸೌಂದರ್ಯದ ತಾಣವು ಕೈಬೀಸಿ ಕರೆಯುತ್ತದೆ.

ಮಲಪ್ರಭೆ ನದಿ ನೆಲೆಸಿದ ಬೀಡಿನಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ, ವೀರಭದ್ರೇಶ್ವರ, ಶಿವ-ಪಾರ್ವತಿ, ನೀಲಾಂಬಿಕೆ, ಕೂಗು ಬಸವೇಶ್ವರ ಹೀಗೆ ಪಂಚ ಮೂರ್ತಿಯ ದೇವರು ಹಾಗೂ ದೇವಸ್ಥಾನದ ಹತ್ತಿರ ಹರಿಯುವ ಕೊಳ್ಳ ಭಕ್ತರನ್ನು ಸೆಳೆಯುತ್ತದೆ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರು ಬಸವಣ್ಣವರು ಬೆಟ್ಟ-ಗುಡ್ಡಗಳ ಮಧ್ಯೆ ತಂಗಿ ಪೂಜಾ-ಕಂಕರ್ಯಗಳನ್ನು ಮಾಡಿರುವುದು ಇಲ್ಲೇ ಎನ್ನುವ ಪ್ರತೀತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net