ಶ್ರೀ ಬರಗೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

CTD--BJP...
Published on

ಚಿತ್ರದುರ್ಗ: ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಬಿಜೆಪಿ ಕಾರ‌್ಯಕರ್ತರು ಶುಕ್ರವಾರ ನಗರದ ಶ್ರೀ ಬರಗೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮೊದಲಾದ ಪ್ರಮುಖರು ಮಾತನಾಡಿದರು. ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಹೇಯ ಕೃತ್ಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರದ ಮೂಲಕ ಭಾರತ ಪಾಕ್‌ಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಪಾಕ್ ತನ್ನ ಕುತಂತ್ರವನ್ನು ಕೈಬಿಡದೆ ಶೆಲ್ ದಾಳಿ ನಡೆಸುವ ಭಾರತವನ್ನು ಕೆಣಕಿ ಅದರಿಂದಲೂ ಮರ್ಮಾಘಾತವನ್ನು ಅನುಭವಿಸುತ್ತಿದೆ. ನಮ್ಮ ಸೈನಿಕರು ದಿಟ್ಟತನದಿಂದ ಪಾಕ್‌ಗೆ ತಿರುಗೇಟು ನೀಡುತ್ತಿದ್ದಾರೆ ಎಂದರು. ವೆಂಕಟೇಶ್ ಯಾ ದವ್,ಸಂಪತ್‌ಕುಮಾರ್,ನಾಗರಾಜ್‌ಬೇದ್ರೆ,ಛಲವಾದಿ ತಿಪ್ಪೇಸ್ವಾಮಿ, ಶ್ಯಾಮಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net