

ಬೇಲೂರು: ಶ್ರೀ ಪೇಟೆ ಗಣಪತಿ ಸೇವಾ ಸಮಿತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ರಂಗಮಂದಿರದಲ್ಲಿ 64ನೇ ವರ್ಷದ ಗಣಪತಿ ಪ್ರತಿಷ್ಠಾಪನೆ ಕಾರ್ಯವು ಸೋಮವಾರ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪೇಟೆ ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪೇಂಟ್ ರವಿ ಮಾತನಾಡಿ, ಕಳೆದ 64 ವರ್ಷಗಳಿಂದಲೂ ಶ್ರೀ ಗಣಪತಿ ಸೇವಾ ಸಮಿತಿಯಿಂದ ಅದ್ದೂರಿಯಾಗಿ ಗಣೇಶೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ 21 ದಿನಗಳವರೆಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ವಿಸರ್ಜನೆ ದಿನದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ತಂಡ ಹಾಗೂ ರೋಡ್ ಆರ್ಕೆಸ್ಟ್ರಾ, ಕೇರಳದ ಚಂಡೆ ಮದ್ದಲೆ, ಬೊಂಬೆ ಕುಣಿತದ ಮೆರವಣಿಗೆ ಮೂಲಕ ಪಟ್ಟಣ ಸಮೀಪದ ವಿಷ್ಣು ಸಮುದ್ರ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಸೇವಾ ಸಮಿತಿ ಗೌರವಾಧ್ಯಕ್ಷ ಬಿಸಿ ಉಮೇಶ್ ತಿಳಿಸಿದ್ದಾರೆ.
ಸಮಿತಿ ಉಪಾಧ್ಯಕ್ಷ ಬಿ.ಬಿ.ಶಿವರಾಜ್. ಮಂಜುನಾಥ್. ಕಾರ್ಯದರ್ಶಿ ಹಾಲಪ್ಪ. ಪಿಡಿಒ ಮಂಜುನಾಥ್, ಕೋಳಿ ಚಂದ್ರು, ಖಜಂಚಿ ಕುಮಾರ್, ಸಮಿತಿಯ ಶಿವೇಗೌಡ, ರಾಮಚಂದ್ರು, ರಾಜು, ನಿವಿತ್, ನಾಗರಾಜು, ಪುರಸಭಾ ಸದಸ್ಯ ಭರತ್ ಸೇರಿದಂತೆ ಇತರರಿದ್ದರು.