ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ

CTD 19 PANCHAMUKI--001
Published on

ಚಿತ್ರದುರ್ಗ:ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ನಗರದ ಹೊಳಲ್ಕರೆ ರಸ್ತೆ ಹೌಸಿಂಗ್‌ಬೋರ್ಡ್ ಕಾಲನಿಯ ಶ್ರೀ ಪಂಚ ಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ,ಪೂಜಾವಿಧಿಗಳು ಮುಂಜಾನೆಯಿಂದ ಜರುಗಿದವು.
ಅನಾನಸ್,ದಾಳಿಂಬೆ,ಮೂಸಂಬಿ ಮೊದಲಾದ ಫಲ-ಪುಷ್ಪಗಳೊಂದಿಗೆ ಸ್ವಾಮಿಯನ್ನು ಅಲಂಕರಿಸಲಾಗಿತ್ತು. ಮುಂಜಾನೆ ಪುರೋಹಿತ ಸಿದ್ದೇಶ್ ಅವರ ನೇತೃತ್ವದಲ್ಲಿ ಶ್ರೀಸ್ವಾಮಿಗೆ ಅಭಿಷೇಕ,ವಿಶೇಷ ಪೂಜೆ,ಮಹಾಮಂಗಳಾರತಿ ಸಹಿತ ನಾನಾ ಪೂಜಾ ವಿಧಿಗಳನ್ನು ಶ್ರದ್ಧಾಭಕ್ತಿ ಯೊಂದಿಗೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಅಲಂಕೃತ ಶ್ರೀ ಸ್ವಾಮಿಯ ದರ್ಶನ ಪಡೆದರು. ಸಂಜೆ ಪ್ರಸಾದ ವಿನಿಯೋಗ ವಿತ್ತು.
(ಸಿಟಿಡಿ 19 ಪಂಚಮುಖಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net