

ಎನ್.ಆರ್.ಪುರ: ಶರನ್ನವರಾತ್ರಿ ಮಹೋತ್ಸವದ ವಿಸರ್ಜನಾ ಮೆರವಣಿಗೆಗೆ ತಹಸೀಲ್ದಾರ್ ಡಾ. ನೂರುಲ್ ಹುದಾ ಗುರುವಾರ ಚಾಲನೆ ನೀಡಿದರು. ಶರನ್ನವರಾತ್ರಿ ಸೇವಾ ಮಹೋತ್ಸವ ಸಮಿತಿಯಿಂದ ತಹಸೀಲ್ದಾರರಿಗೆ ಪೇಟ ತೊಡಿಸಿ ಗೌರವಿಸಲಾಯಿತು. ನಂತರ ಗ್ರಾಮ ದೇವತೆಗಳಾದ ಶ್ರೀ ಗುತ್ಯಮ್ಮ, ಶ್ರೀ ಅಂತರಘಟ್ಟಮ್ಮ, ಶ್ರೀ ಕೊಟ್ಟೂರು ಬಸವೇಶ್ವರ ದೇವರುಗಳೊಂದಿಗೆ ಸುಗ್ಗಪ್ಪನ ಮಠದ ಮಾರನವಮಿ ಬಯಲಿಗೆ ತೆರಳಿ ಅಲ್ಲಿ ಬಂದೂಕಿನಿಂದ ಅಂಬು ಹೊಡೆಯುವ ಹಾಗೂ ಬನ್ನಿ ಮುರಿಯುವ ಕಾರ್ಯಕ್ರಮ ನಡೆಯಿತು.ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಶ್ರೀದೇವಿಯ ಮೆರವಣಿಗೆ ನಡೆಯಿತು.
ರಾತ್ರಿ ಮೆಣಸೂರು ಸಮೀಪದ ಭದ್ರಾ ಹಿನ್ನೀರಿನ ತಟದಲ್ಲಿ ಆಕರ್ಷಕ ವೇದಿಕೆಯಲ್ಲಿ ರಾಗ ಮಯೂರಿ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಮಧುರ ಮಧುರವೀ ಮಂಜಳಾ ಗಾನ ಖ್ಯಾತಿಯ ಗಾಯಕರು ಹಾಗೂ ಅನುಪಮಾ ಸಂಗೀತ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಪಟಾಕಿ ಸಿಡಿಸಿ ತೆಪ್ಪೋತ್ಸವದೊಂದಿಗೆ ಶ್ರೀೀದೇವಿಯನ್ನು ಜಲಸ್ತಂಭನಗೊಳಿಸಲಾಯಿತು.
ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್.ಶೇಷಗಿರಿ, ಕಾರ್ಯದರ್ಶಿ ಎನ್.ಎಂ.ಕಾರ್ತೀಕ್, ಖಜಾಂಚಿ ಎಂ.ಸಿ.ಗುರುಶಾಂತಪ್ಪ, ಜಿ.ದಿವಾಕರ್, ಕೆ.ಎಸ್.ಸಂತೋಷ್, ಎಸ್.ಎಸ್.ಜಗದೀಶ್, ವೈ.ಎನ್.ಇಂದುಶೇಕರ್, ಪ್ರಶಾಂತ್ ಎಲ್. ಶೆಟ್ಟಿ, ಎಚ್.ಎನ್.ರವಿಶಂಕರ್, ನಾಗಿ, ವೈ.ಎಸ್.ರವಿ, ಟಿ.ಎಂ.ನಾಗರಾಜ್, ಮಾವಿನಮನೆ ಮಂಜು, ಕಮ್ತಿ ವಾಸಪ್ಪ ಗೌಡ, ನರೇಶ್ ಲಾಡ್, ನಾಗೇಂದ್ರ ಇತರರಿದ್ದರು.