ಶ್ರೀ ದುರ್ಗಾ ಡೆವಲಪರ್ಸ್​ನಿಂದ ಕ್ಯಾಲೆಂಡರ್ ಬಿಡುಗಡೆ

calendar
Published on

ಹುಬ್ಬಳ್ಳಿ: ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ವತಿಯಿಂದ ಹೊರತಂದ 2025ರ ನೂತನ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಸಮಾರಂಭ ಮಂಗಳವಾರ ನಡೆಯಿತು.

ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆಗೊಳಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಮಾತನಾಡಿ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಎಂಡಿ ವಿರೇಶ ಉಂಡಿ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದೇ, ಸಮಾಜಕ್ಕೆ ಅನುಕೂಲವಾಗುವ ಹತ್ತು ಹಲವು ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾಳಜಿ ಮೆರೆಯುತ್ತಿದ್ದಾರೆ ಎಂದು ಮೆಚ್ಷುಗೆ ವ್ಯಕ್ತಪಡಿಸಿದರು.

ಹೊಸ ವರ್ಷದಲ್ಲಿ ಪ್ರತಿಯೊಂದು ಕುಟುಂಬವು ಸ್ವಂತ ಸೂರು ಹೊಂದುವಂತಾಗಲಿ. ಅಂಥವರಿಗೆ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್​ನಿಂದ ಇನ್ನಷ್ಟು ಸಹಕಾರ ಸಿಗಲಿ ಎಂದು ಹಾರೈಸಿದರು.

ಸಂಸ್ಥೆಯ ಎಂಡಿ ವಿರೇಶ ಉಂಡಿ ಮಾತನಾಡಿ, ಸಮಾಜದ ಕಟ್ಟಕಡೆಯ ಕುಟುಂಬವು ಸ್ವಂತ ನಿವೇಶನ ಅಥವಾ ಮನೆ ಹೊಂದಲು ಅನುಕೂಲವಾಗುವಂತೆ ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದ್ದು ಭವಿಷ್ಯದಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಹುಡಾ ಆಯುಕ್ತ ಸಂತೋಷ ಬಿರಾದಾರ, ಡಿಸಿಪಿ ರವೀಶ, ರಜತ್ ಉಳ್ಳಾಗಡ್ಡಿಮಠ, ಶಹಜಮಾನ ಮುಜಾಹಿದ್, ಸಾನ್ವಿಕಾ ಕಬಾಡೆ, ಶೋಭಾ ಕಡತಾಳ, ಸದ್ದಾಂ ಮುಲ್ಲಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net