ಶ್ರೀ ಜಗನ್ನಾಥದಾಸರ ಆರಾಧನೆ

Nagar sankeertane to mark Jagannath dasar aradhane
Published on

ವಿಜಯಪುರ: ಇಲ್ಲಿನ ವೃಂದಾವನ ನಗರ ಬಡಾವಣೆಯಲ್ಲಿ ಶ್ರೀಮದುತ್ತರಾದಿ ಮಠದ ಭಕ್ತವೃಂದದ ವತಿಯಿಂದ ಶ್ರೀ ಜಗನ್ನಾಥ ದಾಸರ ಆರಾಧನೋತ್ಸವವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು. ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಕೆಲವೇ ಭಕ್ತರು ಶ್ರೀ ಜಗನ್ನಾಥ ದಾಸರ ಭಾವಚಿತ್ರದೊಂದಿಗೆ ನಗರ ವಿವಿಧೆಡೆ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಉತ್ತರಾದಿಮಠದ ಅರ್ಚಕ ಶ್ರೀ ಪ್ರಭಂಜನಾಚಾರ್ಯ ಪೂಜಾರ ಉಪನ್ಯಾಸ ನೀಡಿ, ಜಗನ್ನಾಥದಾಸರು ಮಧ್ವಮತಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಲ್ಲದೆ ದಾಸರ ರಚನೆಗಳು ಭಕ್ತರನ್ನು ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿಯಿದೆ ಎಂದರು. ವಾಮನರಾವ ಕುಲಕರ್ಣಿ ನೇತೃತ್ವದಲ್ಲಿ ನಡೆದ ಸಂಕೀರ್ತನೆಯಲ್ಲಿ ಚೇತನಾ ಕುಲಕರ್ಣಿ, ಜಯಶ್ರೀ ದೇಶಪಾಂಡೆ, ಲಕ್ಷ್ಮೀ ಪಾಟೀಲ, ಮಾಲತಿ ಪೂಜಾರ, ವಾಣಿ ಕುಲಕರ್ಣಿ, ನರಸಿಂಹ ಕುಲಕರ್ಣಿ ಹಾಗೂ ಜಗನ್ನಾಥರಾವ ದೇಶಪಾಂಡೆ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net