ಶ್ರೀ ಚೌಡೇಶ್ವರಿ ದೇವಿ ಕಲಾವಳಿ ಉತ್ಸವ

bnk pooja
ತರುವೆ ಶ್ರೀ ಚೌಡೇಶ್ವರಿ ಅಮ್ಮನವರ ವಾರ್ಷಿಕ ಕಲಾವಳಿ ಉತ್ಸವ ಅಂಗವಾಗಿ ವಿಶೇಷ ಪೂಜೆ ನಡೆಯಿತು.
Published on

ಬಣಕಲ್: ತರುವೆ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ವಾರ್ಷಿಕ ಕಲಾವಳಿ ಉತ್ಸವ ಹಾಗೂ ವಾರ್ಷಿಕ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು.

101 ದೈವಗಳಿಗೆ ದೀಪಾರಾಧನೆ, ನೈವೇದ್ಯ, ಮಹಾ ಮಂಗಳಾರತಿ, ಕಲಾಹೋಮ, ಕಲಶ ಪೂಜೆ, ಪಟ್ಟಧಾರಣೆ ಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ನೈವೇದ್ಯ ಪೂಜೆ, ದೀಪಾರಾಧನೆ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಕೊಟ್ಟಿಗೆಹಾರ, ತರುವೆ, ಬಣಕಲ್, ಅತ್ತಿಗರೆ, ಬಿನ್ನಡಿ, ಆಲೇಕಾನ್ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಹಣ್ಣುಕಾಯಿ ಅರ್ಪಿಸಿದರು. ದೇವಸ್ಥಾನದ ಆವರಣವನ್ನು ತಳಿರು ತೋರಣ, ವಿದ್ಯುತ್ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net