ಶ್ರೀ ಚೌಡಮ್ಮದೇವಿ ವಾರ್ಷಿಕೋತ್ಸವ

oppo_0
oppo_0
Published on

ಬೈಲಕುಪ್ಪೆ: ಸಮೀಪದ ಗುಡ್ಡೆನಹಳ್ಳಿ ಗ್ರಾಮದ ಶ್ರೀ ಚೌಡಮ್ಮದೇವಿ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಟ್ರಸ್ಟ್ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಚೌಡಮ್ಮನ ದೇವಸ್ಥಾನದ ಸಮೀಪದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮೊದಲ ಪೂಜೆ, ಮಂಗಳವಾರ ಅರ್ಚಕರ ತಂಡದಿಂದ ವಿಶೇಷ ಪೂಜೆ ರುದ್ರ ಹೋಮ ನಡೆಯಲಿದೆ.

ಬುಧುವಾರ ಶ್ರೀ ಚೌಡಮ್ಮನ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ, ಗುರುವಾರ ಮುಂಜಾನೆ ಕಾವೇರಿ ನದಿಗೆ ಪೂಜೆ ಸಲ್ಲಿಸಿ ನದಿಯಿಂದ ನೀರನ್ನು ತಂದು ಶ್ರೀ ಚೌಡಮ್ಮನಿಗೆ ನವ ಚಂಡಿಕಾ ಯಾಗ, ವಿವಿಧ ಹೋಮಗಳು ನಡೆಯಲಿವೆ.


ಶುಕ್ರವಾರ ಚೌಡಮ್ಮನಿಗೆ ವಿವಿಧ ಹೋಮಗಳೊಂದಿಗೆ ಅಭಿಷೇಕ, ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಚೌಡಮ್ಮನ ವಾರ್ಷಿಕ ವಿಶೇಷ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಟ್ರಸ್ಟ್ ಅಧ್ಯಕ್ಷ ಎಚ್.ಎಂ.ಚಂದ್ರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net