ಶ್ರೀ ಚನ್ನಯ್ಯ ಸ್ವಾಮೀಜಿ ಲಿಂಗೈಕ್ಯ

swamy
Published on

ಬೀದರ್: ಇಲ್ಲಿಯ ಬಸವ ಮಂಟಪದ ಹಿರಿಯ ಪೂಜ್ಯರಾದ ಚನ್ನಯ್ಯ ಸ್ವಾಮೀಜಿ (75) ಅವರು ಶನಿವಾರ ಲಿಂಗೈಕ್ಯರಾಗಿದ್ದಾರೆ. ಭಾನುವಾರ ಬೆಳಗ್ಗೆ 11ಕ್ಕೆ ತಾಲೂಕಿನ ಅಲಿಯಾಬಾದ್ನ ಬಸವ ಮಂಟಪದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಮೂಲತಃ ಅಲಿಯಾಬಾದ್ ನಿವಾಸಿಯಾದ ಪೂಜ್ಯರು ಬ್ರಹ್ಮಚಾರಿಯಾಗಿ ಬಸವತತ್ವ ಪ್ರಚಾರ, ಪ್ರಸಾರಕ್ಕೆ ಜೀವನ ಮೀಸಲಿಟ್ಟರು. ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ ಪರಮಶಿಷ್ಯರಾಗಿದ್ದ ಶ್ರೀ ಚನ್ನಯ್ಯ ಅವರು ಸುಮಾರು 50 ವರ್ಷಗಳಿಂದ ಬಸವ ತತ್ವದ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದರು. ಲಿಂಗಾನಂದ ಸ್ವಾಮೀಜಿ ಅವರೊಂದಿಗೆ ರಾಜ್ಯ ಸೇರಿ ದೇಶದ ವಿವಿಧೆಡೆ ಸುತ್ತಾಡಿ ವಚನ ಸಾಹಿತ್ಯವನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸಲು ಇವರ ಕೊಡುಗೆ ಅಪಾರ. ಇತರ ಜತೆಯಲ್ಲಿ ನಗರದ ಓಲ್ಡ್ ಸಿಟಿಯಲ್ಲಿನ ಬಸವ ಮಂಟಪ ನಿರ್ವಹಿಸಿಕೊಂಡು ಹೋಗುತ್ತಿದ್ದರು.

ಸಂತಾಪ: ಶ್ರೀ ಚನ್ನಯ್ಯ ಸ್ವಾಮಿ ಅವರ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ಚನ್ನಯ್ಯ ಸ್ವಾಮಿ ಅಗಲಿಕೆ ಬಸವ ಸಮಾಜಕ್ಕೆ ದೊಡ್ಡ ಆಘಾತವಾಗಿದೆ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಕುಶಾಲರಾವ ಪಾಟೀಲ್ ಖಾಜಾಪುರ, ಅಶೋಕ ಶೀಲವಂತ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net