ಶ್ರೀ ಗುರುಪೂರ್ಣಿಮೆ ಮಹೋತ್ಸವ ಪ್ರಯುಕ್ತ 11ರವರೆಗೂ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ವಿವಿಧ ಕಾರ್ಯಕ್ರಮ

05_HSN_06
Published on

ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಜು.4ರ ಶುಕ್ರವಾರದಿಂದ ಜು.10ರವರೆಗೂ ಶ್ರೀಗುರು ಪೂರ್ಣಮೆ ಪ್ರಯುಕ್ತ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜು.11ರ ಶುಕ್ರವಾರ ಶ್ರೀ ಶಿರಡಿ ಸಾಯಿಬಾಬಾರವರ ಉತ್ಸವ ಏರ್ಪಡಿಸಲಾಗಿದೆ.

ಜು.5ರ ಶನಿವಾರ ಸಂಜೆ 6.30ರಿಂದ 8.30ರ ವರೆಗೂ 4ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಂದ ವೇಶಭೂಷಣ ಸ್ಪರ್ಧೆ ನಡೆಯಿತು. ಜು.6ರ ಭಾನುವಾರ ಸಂಜೆ 6.30 ರಿಂದ 8.30ರ ವರೆಗೂ ಮ್ಯಾಂಡೋಲಿನ್ ವಾದನ ನಡೆಯಲಿದ್ದು, ಕೌಸ್ತುಭ್ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಜು. 7ರ ಸೋಮವಾರ ಸಂಜೆ 6.30 ರಿಂದ 8.30ರವರೆಗೂ ತತ್ವಗೀತೆ ಗಾಯನ ಹಮ್ಮಿಕೊಂಡಿದ್ದು, ಸಖರಾಯಪಟಣದ ಶ್ರೀ ವೆಂಕಟಾಚಲ ಅವಧೂತರ ಶಿಷ್ಯ ಎಚ್. ಗೋಪಿನಾಥ್ ಚಿಕ್ಕಮಗಳೂರು ಇವರು ನಡೆಸಿಕೊಡಲಿದ್ದಾರೆ. ಜು. 8ರ ಮಂಗಳವಾರ ಸಂಜೆ 6.30 ರಿಂದ 8.30ರವರೆಗೂ ಗಾನ ವೈಭವ ಏರ್ಪಡಿಸಲಾಗಿದ್ದು, ಭಾಗವತರು ಯಕ್ಷಮಾಣಿಕ್ಯ ಚಿಂತನಾ ಹೆಗ್ಗಡೆ ಮತ್ತು ತಂಡದವರಿಂದ ಹಾಗೂ ಯಕ್ಷ ಪಲ್ಲವಿ ಟ್ರಸ್ಟ್, ಯಕ್ಷಗಾನ ಮಂಡಳಿ ಮಾಳಕ್ಕೋಡ್ ಇವರಿಂದ ಜರುಗಲಿದೆ.

ಜು.9ರ ಬುಧವಾರದ ಸಂಜೆ 6.30 ರಿಂದ 8.30ರ ವರೆಗೂ ಶ್ರೀ ಗುರುಪೂರ್ಣಿಮೆ ಮಹತ್ವ ಮತ್ತು ಆಶೀರ್ವಚನ, ಸ್ವರ್ಣಾ ಪೀಠಿಕೆ ಪುರ, ಶ್ರೀಕ್ಷೇತ್ರ ಗೌರಿಗದ್ದೆಯ ಅವದೂತ ಶ್ರೀ ವಿನಯ್ ಗುರೂಜಿ ನಡೆಸಿಕೊಡುವರು. ಜು.10ರ ಗುರುವಾರ ಶ್ರೀ ಗುರುಪೂರ್ಣಿಮೆ ದಿನದಂದು ಸಂಜೆ 6.30 ರಿಂದ 8.30ರವರೆಗೂ ಶ್ರೀ ಗುರು ಕಾರುಣ್ಯ ಕುರಿತು ಹರಿಕಥೆ ಹಮ್ಮಿಕೊಳ್ಳಲಾಗಿದೆ. ಶೋಭಾನಾಯ್ಡ ರವರ ಶಿಷ್ಯ ಮಧುಸೂದನ ದಾಸರು ನಡೆಸಿಕೊಡಲಿದ್ದಾರೆ. ಜು.11ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಸಾಯಿಬಾಬಾ ಅವರ ಉತ್ಸವವು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಲಿದೆ. ಈ ವೇಳೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಳ್ಳಲಿದೆ. ಭಕ್ತರಿಂದ ಭಜನೆ ಜರುಗಲಿದೆ.

ಪ್ರತಿದಿನ ಕಾಕಡಾರತಿ ಬೆಳಿಗ್ಗೆ 6.15ಕ್ಕೆ, ಮಧ್ಯಾಹ್ನಧಾರತಿ ಮಧ್ಯಾಹ್ನ 12ಕ್ಕೆ ಹಾಗೂ ಧೂಪಾರಾತಿ ಸಂಜೆ 6 ಗಂಟೆಗೆ ಮತ್ತು ಶೇಚಾರತಿ ರಾತ್ರಿ 8.30ಕ್ಕೆ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಆಗಮಿಸಿ ಮಹೋತ್ಸವ ಯಶಸ್ವಿಗೊಳಿಸುವಂತೆ ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net