

ಆಲೂರು: ಬಾಲ್ಯ ಜೀವನದಿಂದಲೂ ತ್ಯಾಗದ ಮೂರ್ತಿ ಗಳಾಗಿ ಹೊರಹೊಮ್ಮಿದ ಸಿದ್ಧಗಂಗಾ ಶ್ರೀ ಗಳು ವಿಶ್ವಕ್ಕೆ ಶ್ರೇಷ್ಠರು ಎಂದು ಯಸಳೂರಿನ ಶ್ರೀ ತೆಂಕಲಗೂಡು ಬೃಹನ್ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆಲೂರು ತಾಲೂಕು ವೀರಶೈವ ಅಂಗಾಯತ ಸಮಾಜದ ವತಿಯಿಂದ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ನಾಲ್ಕನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು, ಶ್ರೀಗಳು ನಡೆದು ಬಂದ ದಾರಿ, ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ಸಿದ್ಧಗಂಗಾ ಮಠದ ಶ್ರೀಗಳು ತ್ರಿವಿಧ ದಾಸೋಹಿಗಳಾಗಿ ಸುಮಾರು 70 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಅವರ ಆದರ್ಶಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. 12ನೇ ಶತಮಾದ ವಿಶ್ವಗುರು ಬಸವಣ್ಣನವರನ್ನು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳಲ್ಲಿ ಕಾಣ ಬಹುದಾಗಿದೆ. ಸಂತರ ಖಾವಿ ಬಟ್ಟೆಗೆ ಗೌರವನ್ನು ತಂದು ಕೊಟ್ಟರು. ಲಕ್ಷಾಂತರ ಮಂದಿ ಹಸಿವನ್ನು ನೀಗಿಸಿ, ಸಮಾಜದ ಉಳಿವಿಗೆ ಜ್ಞಾನ ಗಂಗೆಯನ್ನು ತುಂಬಿ ಶಾಶ್ವತವಾದ ಆಸ್ತಿಯನ್ನು ನೀಡಿ ಸ್ವಾಸ್ಥ ಸಮಾಜಕ್ಕೆ ಬುನಾದಿ ಹಾಕಿ ಕೊಟ್ಟವರು. ಶ್ರೀ ಗಳ ಆದರ್ಶಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಆಳವಡಿಳ್ಳಬೇಕು ಎಂದು ತಿಳಿಸಿದರು.
ತಾಲೂಕು ವೀರಶೈವ ಸಂಘದ ಉಪಾಧ್ಯಕ್ಷ ಡಿ.ಎಸ್ ಜಯಣ್ಣ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ ಎಂಬುದನ್ನು ಅರಿತಿದ್ದ ಶ್ರೀಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಬಯಸಿದ್ದರು. ಧರ್ಮದ ನಿಜ ಅರ್ಥ ತಿಳಿದು ಅದರಂತೆ ಬದುಕಿದ ಸ್ವಾಮೀಜಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ
ಜ. 21 ನ್ನು ರಾಜ್ಯ ಸರ್ಕಾರ ರಾಜ್ಯದಾದ್ಯಂತ ದಾಸೋಹ ದಿನವನ್ನಾಗಿ ಆಚರಣೆ ಮಾಡುವುದಾಗಿ ಹೊರ ತಂದ ಆದೇಶ ಅವರ ಸ್ಫೂರ್ತಿದಾಯಕ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಧರ್ಮರಾಜೇಂದ್ರ ಸ್ವಾಮೀಜಿಗಳನ್ನ ಹಾಗೂ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಸಂಕಲಾಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಕರವೇ ತಾಲೂಕು ಅಧ್ಯಕ್ಷ ಹೆಚ್. ವಿ ರಾಘವೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ತಾಲೂಕು ವೀರಶೈವ ಸಂಘದ ನಿರ್ದೇಶಕರುಗಳಾದ ಲಿಂಗರಾಜ್, ಶಾಂತಾರಾಜ್, ಮಹೇಶ್, ಕಾಂತರಾಜ್, ಹೇಮಂತ್, ವಿಜಯಕಾಂತ್ ಡಾ. ಜಯರಾಜ್, ಸುಜಾತ, ಉಮಾ ರವಿಪ್ರಕಾಶ್, ಹಿರಿಯ ಮುಖಂಡರಾದ , ಪ್ರಸನ್ನ, ಲಿಂಗರಾಜ್, ಯೋಗೇಶ್, ಉಮೇಶ್, ಸೇರಿದಂತೆ ಮುಂತಾದವರು ಹಾಜರಿದ್ದರು,