ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ

jp colony
Published on

ಬೀದರ್: ಇಲ್ಲಿನ ಜಯಪ್ರಕಾಶ (ಜೆಪಿ) ನಗರದಲ್ಲಿ ಸೋಮವಾರ ಶ್ರೀ ಶಿವ ಗಣೇಶ ಮಂದಿರದ ನವೀಕೃತ ಕಟ್ಟಡ ಉದ್ಘಾಟನೆ ಮತ್ತು ಗಣೇಶ ವಿಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಬೆಮಳಖೇಡ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಧಾರ್ಮಾಕ ವಿಧಿ ವಿಧಾನ ಮತ್ತು ಪೂಜಾ ಕಾರ್ಯ ಮೂಲಕ ಗಣೇಶ, ಶಿವಲಿಂಗ ಮತ್ತು ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಗಂಗಾ ಪೂಜೆಯೊಂದಿಗೆ ದೇವಸ್ಥಾನ ಪ್ರವೇಶ ಉತ್ಸವ ನಡೆಯಿತು.

ಗಂಗಾಧರ ಶಾಸ್ತ್ರಿ ಧನ್ನೂರ ಅವರ ಪೌರೋಹಿತ್ಯದಲ್ಲಿ ಪುಣ್ಯಾಹನಾಂದಿ, ಅಂಕುರಾರ್ಪಣೆ, ನವಗ್ರಹ, ಅಷ್ಟ ದೀಕ್ಷಾವರಿ ಮತ್ತು ಉಮಾ ಮಹೇಶ್ವರ ಪೂಜೆ ನೆರವೇರಿತು. ಬಳಿಕ ಮೂರ್ತಿಗಳಿಗೆ ಏಕಾದಶ ರುದ್ರಾಭಿಷೇಕ ಮೂಲಕ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ನಂತರ ಮೂರ್ತಿಗೆ ನೂರೊಂದು ಗರಿಕೆಗಳಿಂದ ಅಷ್ಟೋತ್ತರ, ಮಹಾಮಂಗಳಾರತಿ ಜರುಗಿತು.

ಡಾ.ರಾಜಶೇಖರ ಶ್ರೀ ಆಶೀರ್ವಚನ ನೀಡಿ, ಕರೊನಾ ವಿನಾಶ ಮತ್ತು ಪರಸ್ಪರ ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ಬೆರೆತು ಬಾಳಲು ಇಲ್ಲಿ ವಿವಿಧ ಚಟುವಟಿಕೆ ನಡೆಸಲಾಗಿದೆ. ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡರೆ ನಮ್ಮಲ್ಲಿನ ಪಾಪಗಳು ಕಳೆದು ದೀರ್ಘಾಯುಷ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂದಿರದಲ್ಲಿ ಆಧ್ಯಾತ್ಮಿಕ ಜಾಗೃತಿ, ಚಿಂತನೆ ಕಾರ್ಯಕ್ರಮ ನಿರಂತರ ನಡೆಯಲಿ ಎಂದರು.

ಪ್ರಮುಖರಾದ ಚಂದ್ರಕಾಂತ ಶೆಟಕಾರ, ಕಾಶಿನಾಥರಾವ ಪಾಟೀಲ್, ಡಾ. ಮಾಧವರಾವ ಶೇರಿಕಾರ, ಪ್ರತಾಪ ತಂಬಾಕೆ, ಡಾ. ಸುಭಾಷ ಪಾಟೀಲ್, ರಾಜು ಬೆಮಳಖೇಡಕರ್, ಲಕ್ಷ್ಮಣರಾವ ಬಂಬುಳಗೆ, ದಾದಾರಾವ ಕೋಳೆಕರ್, ಡಾ. ಕಿರಣ ಪಾಟೀಲ್, ಡಾ.ಜ್ಯಾಂತೆ, ರವಿ ಹಾಲಹಳ್ಳಿ, ಆನಂದ ಬಾವಗೆ, ಹಣಮಂತರಾವ ಕೊರಾಳೆ, ಕಲ್ಯಾಣರಾವ ಬಿರಾದಾರ, ಪವನ ಠಾಕೂರ್, ಮುಕುಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net