ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿ ಕಾರ್ತಿಕೋತ್ಸವ

CTD KENCHAMBIKA DEVI----
Published on

ಚಿತ್ರದುರ್ಗ: ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸೋಮವಾರ ರಾತ್ರಿ ಶ್ರೀ ದೇವಿ ಪಾರಾಯಣ, ಮಂಗಳವಾರ ಬೆಳಗ್ಗೆ ಶ್ರೀದೇವಿಗೆ ಅಭಿಷೇಕ ನೆರವೇರಿಸ ಲಾಯಿತು. ಮಹಾಮಂಗಳಾರತಿ ಬಳಿಕ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಹೋಳಿಗೆ, ಅನ್ನ ದಾಸೋಹ ಕಾರ್ಯಕ್ರಮವಿತ್ತು.

ನಾಕೀಕೆರೆ, ಹೊಳಲ್ಕೆರೆ ತಾಲೂಕಿನ ಬೂದಿಪುರ, ಹಾಲೇನಹಳ್ಳಿ, ಗೂಳಿಹೊಸಹಳ್ಳಿ, ಡಿ.ಕೆ. ಹಳ್ಳಿ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವ ದಲ್ಲಿ ಭಾಗವಹಿಸಿದ್ದರು.

ಶಾಸಕ ಬಿ.ಜಿ. ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಮುಖಂಡರಾದ ಡಿ. ಗುರುಸ್ವಾಮಿ, ದೊಡ್ಡಘಟ್ಟ ದ್ಯಾಮಣ್ಣ, ಲಕ್ಕಿಹಳ್ಳಿ ಮುದ್ದಣ್ಣ, ಗ್ರಾಪಂ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು. ನಾಕೀಕೆರೆ, ಹಾಲೇನಹಳ್ಳಿ, ಬೂದಿಪುರದ ನೂರಾರು ಮಹಿಳೆಯರು ಸೋಮವಾರ 3 ಕ್ವಿಂಟಾಲ್ ಹೋಳಿಗೆ ತಯಾರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net