

ಕಡೂರು: ಸರಸ್ವತಿಪುರ ಗ್ರಾಮದಲ್ಲಿ ಶ್ರೀ ಕೊಲ್ಲಾಪುರೇಶ್ವರಿ ಮಹಾಲಕ್ಷ್ಮೀ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜಾತ್ರೆ ಪ್ರಾರಂಭಗೊಂಂಡಿತ್ತು. ಶನಿವಾರ ಬೆಳಗ್ಗೆ ಹೋಮ, ಶ್ರೀದೇವಿ ಉತ್ಸವ ನಡೆಯಿತು. ಮಧ್ಯಾಹ್ನ ಶ್ರೀ ಕೊಲ್ಲಾಪುರೇಶ್ವರಿ ಮಹಾಲಕ್ಷ್ಮೀ ಮತ್ತು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ನಡೆಯಿತು. ಭಕ್ತರು ಪಾನಕದ ಗಾಡಿ ಓಡಿಸಿ ದೇವಿಯ ಹರಕೆ ತೀರಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.