ಶ್ರೀ ಕೇಕುಮನಿ ಭಗವತಿಗೆ ಶಾಸಕ ಪೊನ್ನಣ್ಣ ವಿಶೇಷ ಪೂಜೆ

2-npk--4
Published on

ನಾಪೋಕ್ಲು: ಮರೊಂದೊಡ ಗ್ರಾಮದ ಶ್ರೀ ಕೇಕುಮನಿ ಭಗವತಿ ದೇವರ ಸನ್ನಿಧಾನಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ, ಈ ಭಾಗದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ 8 ಲಕ್ಷ ರೂ. ಮೊತ್ತದ ರಸ್ತೆಯನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಭಗವತಿ ದೇವರಲ್ಲಿ ಪ್ರಾರ್ಥಿಸಿದ ಶಾಸಕರು, ಕ್ಷೇತ್ರದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಹಾಗೂ ಈ ಬಾರಿಯ ಮಳೆಗಾಲವು ಸುಸೂತ್ರವಾಗಿ ಯಾವುದೇ ಹಾನಿಯನ್ನುಂಟು ಮಾಡದೆ ಜನರ ಬಾಳಿಗೆ ಸುಖ-ಶಾಂತಿಯನ್ನು ನೀಡಲಿ ಎಂದು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net