

ಚಿತ್ರದುರ್ಗ: ಜಗದೋದ್ಧಾರಾಕ ಶ್ರೀಕೃಷ್ಣ ಕೃಪಾಕಟಾಕ್ಷ ಎಲ್ಲರಿಗೂ ಬೇಕೆಂದು ವಿದ್ಯಾವಿಕಾಸ ವಿದ್ಯಾಸಂಸ್ಥೆ ನಿರ್ದೇಶಕ ಎಸ್.ಎಣ.ಪೃಥ್ವೀಶ್ ಹೇಳಿ ದ ರು. ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, ಸನ್ಮಾರ್ಗದಲ್ಲಿ ನಡೆಯುವ ವರಿಗೆ ಕೃಷ್ಣ ಬೆಳಕನ್ನು ತೋರಿಸುತ್ತಾನೆ ಹಾಗೂ ಭಗವಂತ ಮಾನವನ ಉದ್ಧಾರಕ್ಕಾಗಿಯೇ ಕೃಷ್ಣ ಅವತಾರದಲ್ಲಿ ಎಲ್ಲ ಬದುಕಿಗೆ ದಾರಿ ದೀಪ ವಾಗಿದ್ದಾನೆ ಎಂದರು.
ಪ್ರಾಚಾರ‌್ಯ ಪಿ.ಬಸವರಾಜಯ್ಯ ಅವರು ಮಾತನಾಡಿ,ಶ್ರೀ ವಿಷ್ಣುವಿನ ದಶ ಅವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೂ ಬಹಳ ವಿಶೇಷ ವಾಗಿದ್ದು,ಜಗತ್ತಿಗೆ ಮಾದರಿಯಾಗಿದೆ. ಕೃಷ್ಣನ ಬಾಲಲೀಲೆಗಳು,ಕೃಷ್ಣನ ಲೀಲೆಗಳು ಅಗಣಿತವಾಗಿವೆ ಎಂದರು. ಮುಖ್ಯಶಿಕ್ಷಕ ಎನ್.ಜಿ.ತಿ ಪ್ಪೇಸ್ವಾಮಿ ಅವರು ಮಾತನಾಡಿ,ಕೃಷ್ಣ ದಯೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದರು. ವಿವಿಧ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಆಯೋ ಜಿಸಲಾಗಿತ್ತು. ಚಿಣ್ಣರು ಕೃಷ್ಣ,ರಾಧೇಯರ ವೇಷದಲ್ಲಿ ಕಂಗೊಳಿಸಿದರು. ಉಪ ಪ್ರಾಚಾರ‌್ಯ ಬಿ.ಅವಿನಾಶ್,ಶಿಕ್ಷಕ,ಶಿಕ್ಷಕೇತರ ವೃಂದದವರು ಇದ್ದರು.