

ಹಾಸನ : ಶ್ರೀ ಕೃಷ್ಣನ ಸಂದೇಶ ಸಾರಗಳು ಒಂದೇ ವರ್ಗಕ್ಕೆ ಸೀಮಿತವಾಗಿಲ್ಲ, ಸಮಾಜದ ಪ್ರತಿಯೊಬ್ಬರು ಅನುಸರಿಸಬೇಕು, ಪ್ರತಿಯೊಬ್ಬರ ಆತ್ಮದಲ್ಲಿಯೂ ಶ್ರೀ ಕೃಷ್ಣನನ್ನು ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಿಳಿಸಿದರು.
ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಸೋಮವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ ಮಹಾಭಾರತದಲ್ಲಿ ರಾಜಕೀಯ ಚಾಣಾಕ್ಷತನ ಹಾಗೂ ರಣರಂಗದಲ್ಲಿ ತತ್ವಜ್ಞಾನಿಯಾಗಿದ್ದರು ಎಂದರು.
ದೇವಕಿಗೆ ಎಂಟನೆಯ ಮಗ ಜನಿಸಿದಾಗ, ಇಡೀ ಅರಮನೆಯು ಮಾಂತ್ರಿಕವಾಗಿ ಪ್ರಚೋದಿತವಾದ ಗಾಢ ನಿದ್ರೆಯಲ್ಲಿ ಮುಳುಗಿತು, ಮತ್ತು ವಾಸುದೇವನು ಮಧ್ಯರಾತ್ರಿಯಲ್ಲಿ ವೃಂದಾವನದಲ್ಲಿರುವ ಯಶೋಧ ಮತ್ತು ನಂದನನ ಮನೆಗೆ ಮಗುವನ್ನು ವರ್ಗಾಯಿಸುವ ಮೂಲಕ ಕಂಸನ ಕೋಪದಿಂದ ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದನು ಎಂದು ತಿಳಿದರು.
ದ್ವಾಪರ ಯುಗದಲ್ಲಿ ಇದ್ದಂತ ಎಲ್ಲಾ ರಾಕ್ಷಸರನ್ನು ಎಲ್ಲಾ ಸಮಾಜ ಪೀಡಿಗರನ್ನು ಅಂತ್ಯಗೊಳಿಸಲು ಶ್ರೀ ಕೃಷ್ಣನ ಪಾತ್ರ ಮಹತ್ವವಾದುದ್ದು ಎಂದರು.
ಅರಸೀಕೆರೆ ಕೋಡಿಮಠ ಕಾಲೇಜಿನ ಉಪನ್ಯಾಸಕ ಡಾ. ಬಿ.ಡಿ. ಕುಮಾರ್ ಅವರು ಮಾತನಾಡಿ, ವಿಶೇಷ ಉಪನ್ಯಾಸ ನೀಡಿ ಶ್ರೀ ಕೃಷ್ಣನ ಆಲೋಚನೆಗಳಲ್ಲಿ ಒಂದಷ್ಟು ವಿಚಾರಧಾರೆಗಳು ಅಂಗ, ಕಾಳಿಂಗ, ಕಾಶ್ಮೀರ, ಕುಶಲ, ಮತ್ಸ್ಯ, ಮಗದ, ಮಧುರ, ದ್ವಾರಕ, ಅಯೋಧ್ಯೆ, ಅಸ್ತಿನಾಪುರ, ಇಂದ್ರಪ್ರಸ್ಥ, ಗೋಕುಲ, ಉತ್ತರ ಭಾರತದ ಶ್ರೀ ಕೃಷ್ಣನ ಆಡಂಬರಗಳು ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್ ಪಿ ತಾರಾನಾಥ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ ಶಿವಣ್ಣ, ಸಮಾಜ ಸೇವಕ ಮಹಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು.