ಶ್ರೀ ಕೃಷ್ಣ ಚಾಣಾಕ್ಷತನ ಮೈಗೂಡಿಸಿಕೊಳ್ಳಲು ಕರೆ

ಶ್ರೀ ಕೃಷ್ಣ ಚಾಣಾಕ್ಷತನ ಮೈಗೂಡಿಸಿಕೊಳ್ಳಲು ಕರೆ
Published on

ಹಾಸನ: ಶ್ರೀ ಕೃಷ್ಣ ಜೀವನ ಚರಿತ್ರೆ ಓದಿ ತಿಳಿದುಕೊಂಡು ಸವಾಲುಗಳನ್ನು ಎದುರಿಸುವ ಚಾಣಾಕ್ಷತನವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅಭಿಪ್ರಾಯಪಟ್ಟಿರು.

ನಗರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕೃಷ್ಣ ಜಯಂತಿ ಆಚರಣೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನೂ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕೃಷ್ಣ ಮಹಾಭಾರತದಲ್ಲಿ ರಾಜಕೀಯ ಚಾಣಾಕ್ಷತನ ಹಾಗೂ ರಣರಂಗದಲ್ಲಿ ತತ್ವಜ್ಞಾನಿಯಾಗಿದ್ದರು, ಶ್ರೀ ಕೃಷ್ಣನಂತೆ ಪ್ರತಿಯೊಬ್ಬರು ತಮ್ಮ ಜೀವನದ ಬಾಲ್ಯದಲ್ಲಿ ತುಂಟಾಟ ಮಾಡಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಿ.ಟಿ ಶಂಕರೇಗೌಡ ಅವರು ಶ್ರೀ ಕೃಷ್ಣ ನಡೆದು ಬಂದ ಹಾದಿ, ಜೀವನ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಯಾದವ ಸಮುದಾಯದ ಮುಖಂಡ ರಾಘವೇಂದ್ರ, ಸ್ವಾತಂತ್ರ್ಯ ಹೋರಾಟ ಹೆಚ್.ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಹೊಮ್ ಬಡ್ಸ್ ಮೆನ್ ರಾಜಗೋಪಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಹರೀಶ್ ಮತ್ತು ಯಾದವ ಸಮಾಜದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net