ಶ್ರೀ ಕಾಳಿಕಾಂಬ ದೇವಾಲಯದಲ್ಲಿ ನವರಾತ್ರಿ ಪೂಜಾ ಸಂಪನ್ನ

04.PYP. 001
Published on

ಪಿರಿಯಾಪಟ್ಟಣ: ತಾಲೂಕಿನ ದೊಡ್ಡಹರವೆ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ 11 ದಿನಗಳ ವಿಶೇಷ ಆಚರಣೆ ವಿಜಯದಶಮಿಯಂದು ಸಂಪನ್ನಗೊಂಡಿತು.

11 ದಿನಗಳ ಕಾಲ ಕಾಳಿಕಾಂಬದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದ್ದು, ಭಕ್ತರು ದೇವರ ಉತ್ಸವದಲ್ಲಿ ಪಾಲ್ಗೊಂಡು ತನು, ಮನ, ಧನ ಸಹಾಯ ಮಾಡಿದ್ದಾರೆ ಎಂದು ತಾಲೂಕು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮದ ದೇವಾಲಯ ಸಮಿತಿ ಮುಖ್ಯಸ್ಥ ಜಗದೀಶ್ ತಿಳಿಸಿದರು.

ನಾಲ್ಕು ವರ್ಷಗಳಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಕೊಂಡು ಬರಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಅಲಂಕಾರ ಮಾಡಿ ದೇವತೆಗಳ ಹೆಸರುಗಳ ಮೂಲಕ ಅವರಿಗೆ ಬಾಗಿನ ಅರ್ಪಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಳಿಕಾಂಬ ದೇವಾಲಯ ಸಮಿತಿ ಸದಸ್ಯ ಮಂಜು ಮಾತನಾಡಿ, ಕಾಳಿಕಾಂಬ ದೇವಿಯ ಪೂಜೆಯ ವಿಶೇಷವೇನೆಂದರೆ ಮಾನವ ಕುಲ, ಪ್ರಾಣಿಯ ಕುಲ ಸೇರಿದಂತೆ ಎಲ್ಲ ವರ್ಗಕ್ಕೂ ಒಳಿತನ್ನು ಬಯಸುವುದು ಮತ್ತು ಸನಾತನ ಧರ್ಮದ ಉಳಿವಿಗಾಗಿ ಪೂಜೆ ಮಾಡಲಾಗಿದೆ ಎಂದರು.

ಅರ್ಚಕ ಪ್ರವೀಣ್ ಆಚಾರ್, ಕಾಳಿಕಾಂಬ ಸೇವಾ ಸಮಿತಿ ಸದಸ್ಯರಾದ ಸೋಮಾಚಾರಿ, ಜೆ.ಪ್ರಕಾಶ್, ಎನ್.ಅಶೋಕ, ಸುಬ್ರಹ್ಮಣ್ಯ, ಸುದರ್ಶನ್, ರಾಜು, ವಿಜಯಕುಮಾರ್, ಸಿದ್ದರಾಜು, ನಾಗೇಶಾಚಾರಿ, ಜಗದೀಶ್, ಕೃಷ್ಣಾ, ಶಂಕರ್, ಕುಮಾರ್, ನಾಗಣ್ಣಾಚಾರ್, ಪ್ರಸನ್ನಮೂರ್ತಿ, ಮನು ಪ್ರಸಾದ್, ಲೋಕೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net