ಶ್ರೀ ಕಲ್ಯಾಣ ಬಸವೇಶ್ವರ ದೇವಸ್ಥಾನ ಉದ್ಘಾಟನೆ

1
Published on

ಸಾಲಿಗ್ರಾಮ: ಸಾಲಿಗ್ರಾಮ ತಾಲೂಕಿನ ಅರಕೆರೆ ಗ್ರಾಮದ ನೂತನ ಶ್ರೀ ಕಲ್ಯಾಣ ಬಸವೇಶ್ವರ ದೇವಸ್ಥಾನವನ್ನು ಸೋಮವಾರ ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.


ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಜನ ಆಶೀರ್ವಾದ ಕಾರ್ಯಕ್ರಮದ ಹೆಸರಲ್ಲಿ ನಗರದ ಪ್ರತಿ ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ಇದೇ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭ ಮಾಡಿದ್ದೆ. ಈ ದೇವರ ಮಹಿಮೆ ಮತ್ತು ಮತದಾರರ ಆಶೀರ್ವಾದದಿಂದ ಶಾಸಕರಾಗಿದ್ದೇನೆ ಎಂದು ಅವರು ಹೇಳಿದರು.


ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ ದೊಡ್ಡಸ್ವಾಮಿಗೌಡ, ಅರಕೆರೆ ಗ್ರಾಮದ ಸುತ್ತಮುತ್ತಲಿನ ಏಳು ಗ್ರಾಮಗಳ ಜನರು ಮತ್ತು ಬಸವಣ್ಣನ ಭಕ್ತರು ಆರ್ಥಿಕ ನೆರವು ನೀಡುವ ಮೂಲಕ ಕಲ್ಯಾಣ ಬಸವ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿಪಿ ರಮೇಶ್ ಮಾತನಾಡಿದರು. ಶ್ರೀ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಭೇರ್ಯ ಪ್ರಕಾಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ದೊಡ್ಡಮ್ಮ ಕರಿಯಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕುಮಾರಸ್ವಾಮಿ, ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ದಿಲೀಪ್‌ಗೌಡ, ಮಾಜಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಅಶ್ವಿನಿ ವಿಲಾಸ್, ಹರ್ಷವರ್ಧನಿ ಮೋಹನ್, ಅನಿಲ್‌ಕುಮಾರ್, ಶಿವಣ್ಣಗೌಡ, ಸಿ.ಪಿ.ಮಂಜಪ್ಪ, ಎ.ಎಸ್.ಮಂಜುನಾಥ್, ಕುಮಾರ್, ಶಿವರಾಜು, ಶಂಕರಪ್ಪ, ತೇಜಸ್, ಸ್ವಾಮಿ, ಲಿಂಗಪ್ಪ, ಅಪ್ಪು, ಶಾಂತ, ಮೂರ್ತಿ, ಕುಮಾರ್, ಯೋಗಣ್ಣ, ಪಿಡಿಒ ಪ್ರತಾಪ್ ಸೇರಿದಂತೆ ಗುಳುವಿನ ಅತ್ತಿಕುಪ್ಪೆ , ಹೊಸೂರು, ಅರಕೆರೆ, ಸಂಕನಹಳ್ಳಿ, ಗೆರೆದಡ, ಬಸವನಪುರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net