ಶ್ರೀ ಕಲಾನಾಥೇಶ್ವರಸ್ವಾಮಿ ರಥೋತ್ಸವ

bnk ratha-1
ಲ್ಗುಣಿ ಗ್ರಾಮದ ಕೋಳೂರು ಸಾವಿರದ ಶ್ರೀ ಕಲಾನಾಥೇಶ್ವರಸ್ವಾಮಿ ರಥೋತ್ಸವ ನಡೆಯಿತು.
Published on

ಬಣಕಲ್: ಲ್ಗುಣಿ ಗ್ರಾಮದ ಕೋಳೂರು ಸಾವಿರದ ಶ್ರೀ ಕಲಾನಾಥೇಶ್ವರಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ನೂತನ ರಥವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ನೂತನ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ವಿವಿಧ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಆವರಣವನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿದರು. ತಹಸೀಲ್ದಾರ್ ರಾಜಶೇಖರಮೂರ್ತಿ, ಮುಜರಾಯಿ ಅಧಿಕಾರಿಗಳು, ಶ್ರೀಕಲಾನಾಥೇಶ್ವರ ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಆರ್.ಸುಧೀೀರ್, ಕನ್ವೀನರ್ ಪಿ.ಎನ್.ಜಗದೀಶ್, ಸಮಿತಿ ಧರ್ಮದರ್ಶಿಗಳು, ಸದಸ್ಯರು, ಕೋಳೂರು ಸಾವಿರದ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net