

ಎಚ್.ಡಿ.ಕೋಟೆ: 2025ರ ಮೇ/ಜೂನ್ ತಿಂಗಳಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 6ನೇ ಸೆಮಿಸ್ಟರ್ (ಎನ್‌ಇಪಿ) ಅಂತಿಮ ಬಿ.ಕಾಂ. ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜಿ.ಎನ್ ವೆಂಕಟೇಶ್ ತಿಳಿಸಿದರು.
ಸಂಸ್ಥೆಯ ಪದವಿ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ಪರೀಕ್ಷೆಯ 6ನೇ ಸೆಮಿಸ್ಟರ್‌ನಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಮಾತನಾಡಿದರು.
ತೃತೀಯ ಬಿ.ಕಾಂ.ನಲ್ಲಿ ಪರೀಕ್ಷೆಗೆ 67 ವಿದ್ಯಾರ್ಥಿಗಳ ಹಾಜರಾಗಿದ್ದರು. ಇವರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 44, ಉನ್ನತ ಶ್ರೇಣಿಯಲ್ಲಿ 17 ಹಾಗೂ ಪ್ರಥಮ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ರಷ್ಟು ಫಲಿತಾಂಶ ಕಾಲೇಜಿಗೆ ದೊರಕಿದೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದಲ್ಲಿ ಎಚ್. ಮನು 700 ಕ್ಕೆ 680 ಅಂಕಗಳು, ಎಸ್. ಹರ್ಷಿತಾ 700 ಕ್ಕೆ 674, ಶನಿಲಾ700 ಕ್ಕೆ 673, ಪಿ.ಅಕ್ಷಾ 700 ಕ್ಕೆ 673 ಅಂಕಗಳನ್ನು ಪಡೆದಿದ್ದಾರೆ. 700 ಕ್ಕೆ 650 ಅಂಕಗಳಿಗಿಂತ ಅಧಿಕವಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶ್ರೀ ಆದಿಚುಂಚನಗಿರಿ ಮೈಸೂರು ಶಾಖ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ. ಕೆ.ಪಿ.ಬಸವೇಗೌಡ ಅಭಿನಂದಿಸಿದರು. ಕಲ್ಲೇಶಗೌಡ, ಎಚ್.ಎಸ್.ಸಿದ್ದೇಗೌಡ, ಸಂಗೀತಾ, ಚಿಕ್ಕದೇವಿ, ರವಿ, ದಿಲೀಪ್, ಸಿದ್ದರಾಜು ಇದ್ದರು.