ಶ್ರೀ ಅಯ್ಯಪ್ಪಸ್ವಾಮಿ ದೇವಳದ ರಜತ ಮಹೋತ್ಸವ

20240702_080743 ---0000
Published on

ಚಿತ್ರದುರ್ಗ:ನಗರದ ಮೆದೇಹಳ್ಳಿ ರಸ್ತೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ರಜತ,ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಜು.5ರಿಂದ 11ರವರೆಗೆ ಅದ್ದೂರಿಯಿಂದ ನಡೆಯಲಿದೆ. 5ರಂದು ಕೇರಳದ ವಿಷ್ಣು ಭಟ್ಟಾದ್ರಿಪಾಡ್,ದೇವಾಲಯದ ಪ್ರಧಾನ ಅರ್ಚಕ ಸತೀಶ್‌ಶರ್ಮ ಮತ್ತವರ ಸಂಗಡಿಗರಿಂದ ಪ್ರಾತಃಕಾಲ,ಸಂಧ್ಯಾಕಾಲದಲ್ಲಿ ದೇವಾಲಯ ಆವರಣದಲ್ಲಿ ಆಚಾರ್ಯವರ್ಣಂ,ಸ್ಥಳ ಶುದ್ಧೀಕರ ಣ,ವಾಸ್ತುಶಾಂತಿ,ವಾಸ್ತು ಬಲಿ,ಅಂಕುರಾರ್ಪಣ ಪೂಜಾ ಕಾರ‌್ಯಕ್ರಮಗಳು ನಡೆಯಲಿವೆ.
ಗಣಹೋಮ,ತತ್ವ ಕಲಶ ಅಭಿಷೇಕ,ಬ್ರಹ್ಮಾದಿ ಪರಿಕಲಾ ಅಭಿಷೇಕಗಳು,ಪ್ರತಿಷ್ಠಾ ಹೋಮ,ಕಲಶಾಭಿಷೇಕ ಹಾಗೂ ಜೀವ ಕಲಶ ಪೂಜೆ ಮೊದಲಾದ ಪ್ರತಿಷ್ಠಾಪನಾ ಪೂಜಾ ಕೈಂಕರಗಳು ಜರುಗಲಿವೆ. 6ರಂದು ಬೆಳಗ್ಗೆ ಗಣಪತಿ ಅಥರ್ವ ಶಿಷ್ಯ ಹೋಮ,ಪೂರ್ಣಾಹುತಿ,ಮಹಾ ಮಂಗಳಾರತಿ ನೆರವೇರಲಿದೆ.
ಸಂಜೆ ವಿಶೇಷ ಕಾರ‌್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. 7ರಂದು ಬೆಳಗ್ಗೆ ಹೋಮ,ತತ್ವ ಕಳಶ ಪೂಜೆ,ತತ್ವ ಹೋಮ, ಕಳಶ ಅಭಿಷೇಕ, ಬ್ರಹ್ಮ ಕಳಸ ಪೂಜೆ ಪರಿಕಳಶ ಪೂಜೆ ಹಾಗೂ ನವಗ್ರಹ ಸಂಹಿತ ಶ್ರೀ ರುದ್ರ ಹೋಮ ಪೂರ್ಣಾಹುತಿ ಮಹಾ ಮಂಗಳಾರತಿ ನೆರ ವೇರಲಿದೆ.
ಸಂಜೆ ಮಂಗಳೂರಿನ ಯಶವಂತ್ ಸುರಭಿ ಸೌಂಡ್ ಸಂಗೀತ ಕಲಾವಿದರು ಕುಸುಮಾಂಜಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 8 ರಂದು ಸ್ಕಂದ ಹೋಮ ಹಾಗೂ ಅಶ್ಲೇಷ ಬಲಿ ಪೂಜೆ ಮಹಾಮಂಗಳಾರತಿ,ಹೋಮ ನೆರವೇರಲಿದೆ. ಸಂಜೆ ಸಂಗೀತಗಾರರಾದ ಮ ಹೇಂದ್ರದಾಸ್,ಶ್ರೀರಾಮಚಂದ್ರ,ಸುನೀತ್‌ಜೋಗಿ ಅವರು ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 9ರಂದು ಲಕ್ಷ್ಮೀ ನಾರಾಯಣ ಹೃದಯ ಹೋಮ ಹಾಗೂ ಪೂರ್ಣಾವತಿ ಮಹಾ ಮಂಗಳಾರತಿ ಪೂಜೆ,ಸಂಜೆ ಮಂಗಳೂರಿನ ಶ್ರೀ ಅಯ್ಯಪ್ಪ ಯಕ್ಷಗಾನ ಕೊಕ್ಕರಣೆ ಮೇಳದಿಂದ ಯಕ್ಷಗಾನವಿರುತ್ತದೆ.
ಕುಂಭಾಭಿಷೇಕದ ದಿನದಂದು ಮಹಾ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. 10ರಂದು ಬೆಳಗ್ಗೆ 7ಕ್ಕೆ ಸಲ್ಲುವ ಕರ್ಕಾಟಕ ಲಗ್ನದ ಶುಭ ಮಹೂರ್ತದಲ್ಲಿ ಪ್ರತಿಷ್ಠಾಪನ ಬ್ರಹ್ಮ ಕಳಸಾ ಅಭಿಷೇಕ ಮತ್ತಿತರ ಅಭಿಷೇಕ,ಪ್ರತಿಷ್ಠಾಬಲಿ ಹಾಗೂ ಚಂಡಿಕಾ ಹೋಮ ನೆರ ವೇರಲಿದೆ.
ಬೆಂಗಳೂರಿನ ಎಚ್.ಎಸ್.ಕಾರ್ತಿಕ್ ಅವರು ಕುಂಭಾಭಿಷೇಕಕ್ಕೆ ಚಾಲನೆ ನೀಡುವರು. ಅಂದಿನ ಕಾರ‌್ಯಕ್ರಮದಲ್ಲಿ ಜಿಲ್ಲೆಯ ಪ್ರಮು ಖರು,ವಿವಿಧ ಸಮಾಜದ ಮುಖಂಡರು ಉಪಸ್ಥಿತರುವರು. ವಿವಿಧ ಕಲಾ ತಂಡಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಮಸ್ತ ಭಕ್ತರಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವಳದ ಪವಿತ್ರ 18 ಮೆಟ್ಟಿಲುಗಳನ್ನು ಹತ್ತುವ ಅವಕಾಶವಿದೆ. 11ರಂದು ರಂದು ಬೆಳಿಗ್ಗೆ ಶ್ರೀ ಆಂಜನೇಯ ಮೂಲ ಮಂತ್ರ ಹೋಮ ಹಾಗೂ ಪೂರ್ಣಾಹುತಿ ಹಾಗೂ ಸಂಜೆ 6 ಗಂಟೆಗೆ ಪವಿತ್ರವಾದ 18 ಮೆಟ್ಟಿ ಲುಗಳಿಗೆ ಪಡಿ ಪೂಜಾ ಕಾರ್ಯಕ್ರಮದ ಮುಖಾಂತರ ಏಳು ದಿನಗಳ ಕಾರ್ಯಕ್ರಮ ಸಮಾಪನವಾಗಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶರಣ್‌ಕುಮಾರ್,ಎಂ.ಪಿ.ವೆಂಕಟೇಶ್, ಬಿ.ಎಸ್.ಮೋಹನ್‌ಕುಮಾರ್,ಮಲ್ಲಿಕಾರ್ಜುನ್ ವಿನಂತಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಶರಣ್‌ಕುಮಾರ್(9448664865), ಎಂ.ಪಿ. ವೆಂಕಟೇಶ್(9342310469)ಹಾಗೂಬಿ.ಎಸ್.ಮೋಹನ್‌ಕುಮಾ(7899336209) ಅವರನ್ನು ಸಂಪರ್ಕಿಸಬಹುದು.
ದೇವಳದ ಐತಿಹ್ಯ
ಐತಿಹಾಸಿಕ ನಗರಿ ಚಿತ್ರದುರ್ಗ ಮೆದೇಹಳ್ಳಿ ರಸ್ತೆಯಲ್ಲಿರುವ 350 ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾದ ಭೀಮಶಂಕರ ಮತ್ತು ಭೀ ಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮತೀರ್ಥ ಸ್ವಾಮೀಜಿ ಸಹಕಾರದೊಂದಿಗೆ 1999ರಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀಗಣೇಶ ,ಶ್ರೀಸುಬ್ರಹ್ಮಣ್ಯ,ಶ್ರೀವಿಷ್ಣು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ಪ್ರತಿ ವರ್ಷವೂ ಸನ್ನಿಧಾನದಲ್ಲಿ ವಿಶೇಷವಾಗಿ ವಾರ್ಷಿಕೋತ್ಸವ,ಬ ಹ್ಮೋತ್ಸವ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಉಚಿತ ಅನ್ನದಾನ ಕಾರ‌್ಯಕ್ರಮ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಮೊದಲನೇ ಕುಂಭಾಭಿಷೇಕವು 2012 ರಲ್ಲಿ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತ್ತು.
ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣವಾಗಿ 25 ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ಸ್ವಾಮಿ ಗರ್ಭಗುಡಿಯ ಸುತ್ತಲೂ ತಾಮ್ರದ ಹೊದಿಕೆ ಹಾಗೂ ದೇವಾಲಯದ ಬಾಗಿಲನ್ನು ಬೆಳ್ಳಿ ಕವಚದಿಂದ ನಿರ್ಮಾಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net